ಜಿಲ್ಲೆ

ಜು.26ರಂದು ಜಿಕೆವಿಕೆಯಲ್ಲಿ ‘ರೈತ ಸಂತೆ’

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯ ಗಣಪತಿ ದೇವಸ್ಥಾನದ ಬಳಿ ಶನಿವಾರ (ಜು.26) ಬೆಳಿಗ್ಗೆ 7ರಿಂದ 4 ಗಂಟೆಯವರಿಗೆ ‘ರೈತ ಸಂತೆ’ ಆಯೋಜಿಸಲಾಗಿದೆ.

ಬೆಳೆಗಾರರು ಹಾಗೂ ಸ್ವ ಸಹಾಯ ಸಂಘಗಳ ಮೂಲಕ ಗ್ರಾಹಕರಿಗೆ ನೇರ ಮಾರಾಟ ಹಾಗೂ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಿಂಗಳ ಕೊನೆಯ ಶನಿವಾರ ನಡೆಯುವ ರೈತ ಸಂತೆಯಲ್ಲಿ ಈ ಬಾರಿ ಸಗಣಿಯಿಂದ ತಯಾರಿಸಿದ ವೈವಿಧ್ಯಮಯ ಉತ್ಪನ್ನ (ಹಣತೆ, ಗೋಡೆಗೆ ನೇತುಹಾಕುವ ಕಲಂಕಾರಿಕೆ, ಮೊಬೈಲ್ ಸ್ಟಾಡ್, ಗಣೇಷ ಮೂರ್ತಿ ಇತ್ಯಾದಿ), ರಾಜಮುಡಿ ಅಕ್ಕಿ, ತಜಾ ಅಣಬೆ, ಆರೋಗ್ಯಯುತ ಹಣ್ಣು ತರಕಾರಿಗಳ ಪಾನಿಯ ಮಿಶ್ರಣ ಹಾಗೂ ಅಲಂಕಾರಿಕ ಮೀನು ಮರಿಗಳು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಜತೆಗೆ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನ, ತೋಟಗಾರಿಕೆ ಹಣ್ಣುಗಳು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಜೈವಿಕ ಗೊಬ್ಬರ, ಎರೆಹುಳು ಗೊಬ್ಬರ, ಕರಕುಶಲ ವಸ್ತುಗಳು, ಅಡಿಕೆ/ರೇಷ್ಮೆ ಕೃಷಿಯ ಉಪ ಉತ್ಪನ್ನಗಳು, ತಾರಸಿ ಕೈತೋಟ/ನಗರ ತೋಟಗಾರಿಕೆ ಇತ್ಯಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.