ಮಾಂಜರಿ: ಕಬ್ಬು ಬೆಳೆಗಾರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಚಿದಾನಂದ ಕೋರೆ ಅವರು ಸ್ಥಾಪಿಸಿದ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯು, ನೀರಾವರಿ ಯೋಜನೆ, ಆರೋಗ್ಯ ಸೇವೆ ಮತ್ತು ರಾಸಾಯನಿಕ ಗೊಬ್ಬರ ಮತ್ತು ಇತರ ಉಪಕರಣಗಳು ಅಗ್ಗದ ದರದಲ್ಲಿ ಒದಗಿಸಲು ಕೃಷಿ ಬಜಾರ್ ಕೇಂದ್ರ ನಿರ್ಮಾಣ ಮಾಡಿದೆ. ರೈತರು ಕೃಷಿ ಬಜಾರ್ ಸೇವೆ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಚಿಕ್ಕೋಡಿಯ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಹೊಸದಾಗಿ ಸ್ಥಾಪಿಸಿರುವ ಕೃಷಿ ಬಜಾರ ಕೇಂದ್ರ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್‌ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ನಮ್ಮ ಸಕ್ಕರೆ ಕಾರ್ಖಾನೆ ರೂವಾರಿ ಡಾ.ಪ್ರಭಾಕರ ಕೋರೆ ಹಾಗೂ ರಾಷ್ಟ್ರೀಯ ಸಕ್ಕರೆ ಕಾರ್ಖಾನೆಯ ಮಹಾಮಂಡಳಿಯ ಹೊಸದೆಹಲಿ ನಿರ್ದೇಶಕ ಅಮಿತ್ ಕೋರೆ ಅವರ ನೇತೃತ್ವದಲ್ಲಿ ಹಲವಾರು ಜನಪರ ಯೋಜನೆ ರೂಪಿಸಿ ಜಮೀನುಗಳಿಗೆ ನೀರಾವರಿ ಕಲ್ಪಿಸಲಾಗಿದೆ. ಈಗ ಇಲ್ಲಿನ ಕಬ್ಬು ಬೆಳೆಗಾರ ನೆರವಿನ ದೃಷ್ಟಿಯಿಂದ ಕೃಷಿ ಬಜಾರ ಸೇವಾ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಡಾ.ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ನಿರ್ದೇಶಕ ಭರತೇಶ ಬನವಣಿ, ಅಜಿತರಾವ್ ದೇಸಾಯಿ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ, ರಾಮಗೌಡ ಹುಕ್ಕೇರಿ, ಗೋಕಾಕ ಕೃಷಿ ಅಕಾರಿ ಎಸ್.ಬಿ. ಕರಜಗಿ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಬಿ.ಖಂಡಗಾವಿ ಇತರರಿದ್ದರು. ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಎಂ.ಎಸ್. ಹಿರೇಮಠ ನಿರೂಪಿಸಿದರು.