ಜಿಲ್ಲೆ

ಬೆಳೆ ಹಾನಿ ಪರಿಹಾರ ನೀಡಲು ರೈತರ ಆಗ್ರಹ

ಗಿರೀಶ ಸಗರ

ಚಡಚಣ:ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಕೃಷಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಜಂಟಿ ಸಮೀಕ್ಷೆ ಅಥವಾ ವೈಮಾನಿಕ ಸಮೀಕ್ಷೆ ನೆಪದಲ್ಲಿ ಕಾಲ ಹರಣ ಮಾಡದೇ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ವತಿಯಿಂದ ತಹಸೀಲ್ದಾರ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಸಂದ ಜಿಲ್ಲಾಧ್ಯ ಸಂಗಮೇಶ ಸಗರ ಮಾತನಾಡಿ, ಪ್ರತಿ ರೈತನ ಒಣಭೂಮಿಗೆ 50 ಸಾವಿರ, ನೀರಾವರಿ ಭೂಮಿಗೆ ಒಂದು ಲಕ್ಷ ರೂ ಹಾಗೂ ಬಹುವಾರ್ಷಿಕ ಬೆಳೆಗಳಿಗೆ 2 ಲ ರೂ. ಪರಿಹಾರ ನೀಡಬೇಕು. ತೊಗರಿ, ಹತ್ತಿ, ಮೆಕ್ಕೆಜೋಳ, ಸಜ್ಜಿ ಸೇರಿ ತೋಟ ಬೆಳೆಗಳಾದ ದ್ರಾ, ದಾಳಿಂಬೆ, ಲಿಂಬೆ, ಬಾಳೆ ಎಲ್ಲವೂ ನೀರಿನಲ್ಲಿ ನಿಂತು ಹಾಳಾಗಿವೆ. ಆದ್ದರಿಂದ 15 ದಿನಗಳೊಳಗೆ ಎಲ್ಲ ರೈತರೂ ಪರಿಹಾರ ಪಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಾಲೂಕು ಅಧ್ಯ ವಸಂತ ಬೈರಾಮಡಿ ಮಾತನಾಡಿ, ಭೀಮಾ, ಕೃಷ್ಣಾ ಹಾಗೂ ಡೋಣಿ ನದಿಗಳ ಪ್ರವಾಹದಿಂದ ಅನೇಕ ರೈತರ ಭೂಮಿಗಳು ಹಾಗೂ ಮನೆ ಮಠಗಳು ಹಾನಿಗೊಂಡಿವೆ. ಸಾಕಷ್ಟು ಪಶುಗಳು ಸತ್ತಿವೆ. ತಣ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಕಾರ್ಯದರ್ಶಿ ಮಹದೇವ ಬನಸೋಡೆ ಮಾತನಾಡಿ, ಕೆಲ ರೈತರಿಗೆ ಮಾತ್ರ ನಷ್ಟ ಪರಿಹಾರ ವರದಿ ಸಿದ್ಧಪಡಿಸಿ ಅನ್ಯಾಯವಾಗುತ್ತಿದೆ. ಮತ್ತೊಮ್ಮೆ ಸಮೀಕ್ಷೆ ಮಾಡಿ ಎಲ್ಲ ಹಳ್ಳಿಗಳ ರೈತರಿಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ತಹಸೀಲ್ದಾರ ಎಸ್​.ಬಿ. ಇಂಗಳೆ ಮನವಿ ಸ್ವೀಕರಿಸಿ ಮಾತನಾಡಿ, ಮೊದಲ ಹಂತದಲ್ಲಿ ನಷ್ಟಗೊಂಡ ರೈತರಿಗೆ ಪರಿಹಾರ ಗುರುತಿಸಲಾಗಿದೆ. ಇತ್ತೀಚಿನ ಮಳೆಯಿಂದ ಹೆಚ್ಚುವರಿ ನಷ್ಟವಾದವರ ವಿವರವನ್ನು ಗ್ರಾಪಂ ಅಥವಾ ತಲಾಟಿ ಕಚೇರಿಗಳಲ್ಲಿ ಅಂಟಿಸಲಾಗಿದೆ. ಹಾನಿಗೊಳಗಾದ ಉಳಿದ ರೈತರು ದಾಖಲೆಗಳನ್ನು ನೀಡಿ ನೋಂದಾಯಿಸಿಕೊಳ್ಳಬಹುದಾಗಿದ ಎಂದು ಹೇಳಿದರು.ಗೌರವಾಧ್ಯ ಮುರುಗೇಂದ್ರ ಸಿಂಪಿ, ಗೇನಪ್ಪ ಬಿರಾದಾರ, ಶಿವಾನಂದ ಬಿರಾದಾರ, ಉಜ್ವಲ ಡೊಳ್ಳಿ, ಚನ್ನಪ್ಪ ಕುರ್ಲೆ, ರವೀಂದ್ರ ಕೇಶೆಟ್ಟಿ, ಮಹಾದೇವ ಕರಮಳ, ಲಾಯಪ್ಪ ವಾಮೋರೆ, ಭೀಮು ಕಡಮನಿ, ಪ್ರಕಾಶ ಬತಗುಣಕಿ, ಭೀಮಾಶಂಕರ ಉಮ್ರಾಣಿ, ಭಾಗಣ್ಣ ಕೋಳಿ, ಖಾನಗೊಂಡ ಪಾಟೀಲ, ರಮೇಶ ಕೋಳಿ, ಸಿದ್ರಾಮ ಕೋಳಿ, ಬಸವರಾಜ ಹೂಗಾರ, ಪುಟ್ಟು ತೇಲಿ ಇತರರಿದ್ದರು.

ಸಿಡಿಎನ್​ 15&1: ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ವತಿಯಿಂದ ತಹಸೀಲ್ದಾರ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯ ವಸಂತ ಬೈರಾಮಡಿ, ಜಿಲ್ಲಾ ಕಾರ್ಯದರ್ಶಿ ಮಹದೇವ ಬನಸೋಡೆ, ಗೌರವಾಧ್ಯ ಮುರುಗೇಂದ್ರ ಸಿಂಪಿ, ಗೇನಪ್ಪ ಬಿರಾದಾರ, ಶಿವಾನಂದ ಬಿರಾದಾರ ಇತರರಿದ್ದರು.