ಜಿಲ್ಲೆ

ಸಿಡಿಲು ಬಡಿದು ರೈತ ಸಾವು

ರಾಣೆಬೆನ್ನೂರ: ಗುರುವಾರ ರಾತ್ರಿ ಸುರಿದ ಮಳೆಗೆ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ. ಕಾಂತೇಶ ಆಂಜನಪ್ಪ ತಳವಾರ (29) ಮೃತ ರೈತ. ಇವರು ಕಣದಲ್ಲಿ ಕಟ್ಟಿದ ಎಮ್ಮೆಗಳಿಗೆ ಮೇವು ಹಾಕಲು ಹೋದ ಸಮಯದಲ್ಲಿ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.