ಕಾಸರಗೋಡು: ಜಿಲ್ಲಾಮಟ್ಟದ ಕೃಷಿಕರ ದಿನವನ್ನು ಮೊಗ್ರಾಲ ಪುತ್ತೂರು ಗ್ರಾಮ ಪಂಚಾಯಿತಿ ಕೃಷಿ ಭವನ ಆಶ್ರಯದಲ್ಲಿ ಆಚರಿಸಲಾಯಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಸಮೀರ ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಉಪನಿರ್ದೇಶಕ ಪಿ.ಕೆ.ಸ್ಮಿತಾ ನಂದಿನಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು. ಕೆ.ಎಫ್.ಮುಹಮ್ಮದ್, ಗ್ರಾಪಂ ಉಪಾಧ್ಯಕ್ಷ ಮುಜೀಬ್ ಕಂಬಾರ, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕದೀಜಾ ಅಬ್ದುಲ್ ಕಾದರ್, ನಿಸಾರ್ ಕುಳಂಗರ, ಪ್ರಮೀಳಾ ಮಜಲ್, ಬ್ಲಾಕ್ ಪಂಚಾಯಿತಿ ಸದಸ್ಯ ಸೀನತ್ ನಜೀರ್, ಕೃಷಿ ಸಹಾಯಕ ನಿರ್ದೇಶಕಿ ಅಶ್ವತಿ ಟಿ. ವಾಸು, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ.ಸುಲೋಚನಾ, ಅಸ್ಮಿನಾ ಶಾಫಿ, ಗಿರೀಶ್, ಜುಬೈರಿಯಾ ಶಿಹಾಬ್, ಕೆ.ಪಿ.ಸಂಪತ್ ಕುಮಾರ್, ಪಿ.ಎಂ.ಮಹಮ್ಮದ್ ರಫಿ, ಶಮೀಮಾ ಸಾದಿಕ್, ಮಲ್ಲಿಕಾ ಧರ್ಮಪಾಲ್, ನೌಫಲ್ ಪುತ್ತೂರು, ಕೆವಿಕೆ ಯೋಜನಾ ಸಂಯೋಜಕ ಡಾ.ಟಿ.ಎಸ್. ಮನೋಜ್, ಪಂಚಾಯಿತಿ ಕಾರ್ಯದರ್ಶಿ ಎ.ಆರ್.ಪ್ರಶಾಂತ್ ಕುಮಾರ್, ಪಶು ವೈದ್ಯಾಧಿಕಾರಿ ವಿ.ಬಿ.ಸೀನಾ, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ರಜಿಯಾ ಮೊದಲಾದವರಿದ್ದರು. ಪಂಚಾಯಿತಿ ಕೃಷಿ ಅಧಿಕಾರಿ ವಿ.ಅಕ್ಷತಾ ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ಕೆ.ಮುರಳೀಧರನ್ ನಾಯರ್ ವಂದಿಸಿದರು.