ಜಿಲ್ಲೆ

ನೇಗಿಲಯೋಗಿ ಪ್ರಶಸ್ತಿ ಪ್ರದಾನ

Dharwada - Basavaraj Idli

ಹುಬ್ಬಳ್ಳಿ: ತಾಲೂಕು ರೈತ ಸಂದ ವತಿಯಿಂದ ರೈತ ದಿನಾಚರಣೆ ನಿಮಿತ್ತ ಪ್ರಗತಿಪರ ರೈತರಿಗೆ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ವೀರಾಪುರ ಓಣಿಯ ರೈತ ಭವನದಲ್ಲಿ ಡಿ. 23ರಂದು ಸಂಜೆ 4ಕ್ಕೆ ಏರ್ಪಡಿಸಲಾಗಿದೆ.

ರಾಯನಾಳ ವಿರಕ್ತಮಠದ ಶ್ರೀ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಪ್ರಸಾದ ಅಬ್ಬಯ್ಯ ಅವರು 2025ರ ಕ್ಯಾಲೆಂಡರ್ ಬಿಡುಗಡೆ ಮಾಡುವರು.

ಪದ್ಮಶ್ರೀ ಪುರಸ್ಕೃತ ಅಬ್ದುಲಖಾದರ ನಡಕಟ್ಟಿ, ಚನ್ನಬಸಪ್ಪ ಅಸುಂಡಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಘದ ಅಧ್ಯಕ್ಷ ಸಿದ್ದಪ್ಪ ಮೀಶಿ ಅಧ್ಯಕ್ಷತೆ ವಹಿಸುವರು.

ಪ್ರಗತಿಪರ ರೈತರಾದ ಕಲ್ಲಪ್ಪಗೌಡ್ರ ಪಾಟೀಲ, ಸಣ್ಣಇಮಾಮಸಾಬ ಮೊರಬ, ಪರಮೇಶ್ವರಪ್ಪ ಬಂಡೆಪ್ಪನವರ, ಯಲ್ಲಪ್ಪಗೌಡ ಪಾಟೀಲ, ಬಸವರಾಜ ಶಿಂದಗಿ, ಪರ್ವತಗೌಡ ಪಾಟೀಲ, ಶಿವಪ್ಪ ಮೀಶಿ, ನಿಂಗನಗೌಡ್ರ ಪಾಟೀಲ, ಮಹಾದೇವಪ್ಪ ಅಸುಂಡಿ, ನಿಂಗಪ್ಪ ಜಕ್ಕಲಿ, ಗಂಗಾಧರ ಸುಳ್ಳದ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.