ಕೆ.ಆರ್.ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಪಿಎಲ್‌ಡಿ ಬ್ಯಾಂಕ್ ಕಟ್ಟಡವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಮಂಡ್ಯ ಜಿಲ್ಲಾ ಕಾಸ್ಕಾರ್ಡ್ ಬ್ಯಾಂಕ್ ನಿರ್ದೇಶಕ ತಿಮ್ಮರಾಯಿಗೌಡ, ಬ್ಯಾಂಕ್ ಅಧ್ಯಕ್ಷ ಬಿ.ಎಂ.ಮಲ್ಲಿಕಾರ್ಜುನ ಬ್ಯಾಂಕ್ ಉಪಾಧ್ಯಕ್ಷೆ ಪುಷ್ಪಾ ್ಪರೇವಣ್ಣ, ನಿರ್ದೇಶಕರಾದ ಎಂ.ಎಸ್.ಹರಿಚಿದಂಬರ, ಪ್ರದೀಪಕುಮಾರ್ ಇತರರು ಇದ್ದರು. 
ಜಿಲ್ಲೆ

ದೇಶದ ಅಭಿವೃದ್ಧಿಗೆ ರೈತರ ಕೊಡುಗೆ ಅಪಾರ

 ಕೆ.ಆರ್.ನಗರ: ದೇಶದ ಅಭಿವೃದ್ಧಿಗೆ ರೈತರ ಕೊಡುಗೆ ಅಪಾರವಾಗಿದ್ದು, ಅವರಿಗೆ ಪಿಎಲ್‌ಡಿ ಬ್ಯಾಂಕ್ ಜೀವನಾಡಿಯಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಡಾ.ಬಾಬು ಜಗಜೀವನ ರಾಮ್ ಸಮುದಾಯ ಭವನದ ಬಳಿ ನೂತನವಾಗಿ ನಿರ್ಮಿಸಿರುವ ಪಿಎಲ್‌ಡಿ ಬ್ಯಾಂಕ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಪಿಎಲ್‌ಡಿ ಬ್ಯಾಂಕ್ ಅಭಿವೃದ್ಧ್ದಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಕೊಡಿಸಿ ರೈತರ ಬೆನ್ನೆಲುಬಾಗಿ ನಿಲ್ಲುತ್ತೇನೆ. ಆಡಳಿತ ಮಂಡಳಿಯವರು ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಎಂದು ಸಲಹೆ ನೀಡಿದರು.

ರೈತರ ಜೀವನಾಡಿಯಾಗಿರುವ ಸಹಕಾರ ಬ್ಯಾಂಕುಗಳು ಮತ್ತು ಸಂಘಗಳನ್ನು ಉಳಿಸಿ ಬೆಳೆಸುವ ಮೂಲಕ ಅನ್ನದಾತನಿಗೆ ಸಹಾಯ ಹಸ್ತಚಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಾಲ ಪಡೆಯುವ ರೈತರು ಸಕಾಲದಲ್ಲಿ ಮರುಪಾವತಿ ಮಾಡಿ ಹೊಸ ರೈತ ಸದಸ್ಯರು ಸಾಲ ಪಡೆದುಕೊಳ್ಳಲು ಸಹಕಾರ ನೀಡಬೇಕು ಎಂದು ತಿಳಿಸಿದರು.

ಬ್ಯಾಂಕ್‌ಗೆ ಹೆಚ್ಚು ಹಣ ಕೊಡಿಸಿ ರೈತರ ಅಗತ್ಯತೆಗೆ ತಕ್ಕಂತೆ ಸಾಲ ನೀಡಲು ಸಹಕಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಇತರರ ಜತೆ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ಬೇಡಿಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.

ಮಂಡ್ಯ ಜಿಲ್ಲಾ ಕಾಸ್ಕಾರ್ಡ್ ಬ್ಯಾಂಕ್ ನಿರ್ದೇಶಕ ತಿಮ್ಮರಾಯಿಗೌಡ, ಬ್ಯಾಂಕ್ ಅಧ್ಯಕ್ಷ ಬಿ.ಎಂ.ಮಲ್ಲಿಕಾರ್ಜುನ ಮಾತನಾಡಿದರು. ಇದಕ್ಕೂ ಮೊದಲು ಕಾಸ್ಕಾರ್ಡ್ ಬ್ಯಾಂಕ್‌ನ ಅಧ್ಯಕ್ಷರು ಆದ ತಿಪಟೂರು ಶಾಸಕ ಕೆ.ಎನ್.ಷಡಕ್ಷರಿ ಬ್ಯಾಂಕ್‌ಗೆ ಭೇಟಿ ನೀಡಿ ಶುಭ ಹಾರೈಸಿದರು. ಪುರಸಭೆ ಸದಸ್ಯ ಕೋಳಿಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಬ್ಯಾಂಕ್ ಉಪಾಧ್ಯಕ್ಷೆ ಪುಷ್ಪಾ ರೇವಣ್ಣ, ನಿರ್ದೇಶಕರಾದ ಎಂ.ಎಸ್.ಹರಿಚಿದಂಬರ, ಎನ್.ಸಿ.ಪ್ರಸಾದ್, ಬಿ.ಎಸ್.ಚಂದ್ರಹಾಸ, ಕಲಾವತಿ, ಆರ್.ಸಿ.ರಮೇಶ್, ಪ್ರೇಮಾ ಕುಳ್ಳಬೋರೇಗೌಡ, ಬಿ.ಸಿದ್ದೇಗೌಡ, ಕೆ.ಟಿ.ಚಂದ್ರೇಗೌಡ, ಸಿ.ಎಸ್.ಚಂದ್ರಶೇಖರ್, ಪರಶುರಾಮಯ್ಯ, ರಾಮೇಗೌಡ, ಸಿದ್ದನಾಯಕ, ಪ್ರದೀಪಕುಮಾರ್, ವ್ಯವಸ್ಥಾಪಕ ನವೀನ್‌ಕುಮಾರ್ ಸಿಬ್ಬಂದಿ ಇದ್ದರು.