ಜಿಲ್ಲೆ

ರೈತರನ್ನು ಕಂಗೆಡಿಸಿದ ವಿದ್ಯುತ್ ಕಣ್ಣಾಮುಚ್ಚಾಲೆ

ಸಮರ್ಪಕವಾಗಿ ತ್ರೀ ೇಸ್ ಕರೆಂಟ್ ಪೂರೈಕೆ ಇಲ್ಲದೆ ಆಲೂಗಡ್ಡೆ ಬೆಳೆ ಹಾನಿ

ಗುಡಿಬಂಡೆ: ತಾಲೂಕಿನಾದ್ಯಂತ ಪಂಪ್‌ಸೆಟ್‌ಗೆ ಸಮರ್ಪಕವಾಗಿ ತ್ರೀ ೇಸ್ ವಿದ್ಯುತ್ ಪೂರೈಸದ ಹಿನ್ನೆಲೆಯಲ್ಲಿ ಬೆಳೆಗಳು ಒಣಗುತ್ತಿದ್ದು, ರೈತರು ಆತಂಕ ಪಡುವಂತಾಗಿದೆ.

ಹೌದು. ತಾಲೂಕಿನಾದ್ಯಂತ ತಾಪಮಾನ ಹೆಚ್ಚಾಗಿದ್ದು, ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿಲ್ಲ. ಗುಡಿಬಂಡೆ ಭಾಗದಲ್ಲಿ ರೈತರು ಆಲೂಗಡ್ಡೆ ಹೆಚ್ಚಾಗಿ ಬೆಳೆದಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಮರ್ಪಕವಾಗಿ ನೀರು ಪೂರೈಸಲಾಗದೆ ಬೆಳೆಗಳು ಒಣಗುತ್ತಿವೆ. ಸಮರ್ಪಕ ವಿದ್ಯುತ್ ಪೂರೈಸುವಂತೆ ಬೆಸ್ಕಾಂಗೆ ರೈತರು ಮೊರೆ ಇಟ್ಟರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಆತಂಕದಲ್ಲಿ ಆಲೂಗಡ್ಡೆ ಬೆಳೆಗಾರರು

ಈ ಬಾರಿ ತಾಲೂಕಿನಲ್ಲಿ ಹೆಚ್ಚು ರೈತರು ಆಲೂಗಡ್ಡೆ ಬಿತ್ತನೆ ಮಾಡಿದ್ದಾರೆ. ಈಗಾಗಲೇ ಬಿತ್ತನೆ ಮಾಡಿ 2 ತಿಂಗಳು ಕಳೆದಿದ್ದು, ಸಲು ಬರುವ ಸಮಯದಲ್ಲಿ ನೀರು ಪೂರೈಸಲಾಗದೆ ನಷ್ಟ ಅನುಭವಿಸುವಂತಾಗಿದೆ. ಸುಡು ಬಿಸಿಲಿಗೆ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿ, ಬೆಳೆ ಬಾರದಂತಾಗಿದೆ. ವಿದ್ಯುತ್ ನಂಬಿ ಪಂಪ್‌ಸೆಟ್‌ದಾರರು ಬೆಳೆ ಬೆಳೆಯಲು ಮುಂದಾದರೆ ಸಮರ್ಪಕವಾಗಿ ತ್ರೀ ೇಸ್ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ಬಣಗುತ್ತಿರುವ ಬೆಳೆ ನೋಡಿ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ವಿದ್ಯುತ್‌ಗಾಗಿ ರಾತ್ರಿಯಿಡೀ ಕಾಯುವ ಸ್ಥಿತಿ

ರೈತರು ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತನ ಗೋಳು ಕೇಳೋರೇ ಇಲ್ಲದಂತಾಗಿದೆ. ಬೆಳೆಗಳಿಗೆ ನೀರು ಪೂರೈಸಲು ಇಡೀ ರಾತ್ರಿ ನಿದ್ದೆ ಮಾಡದೆ ವಿದ್ಯುತ್‌ಗಾಗಿ ಚಾತಕ ಪಕ್ಷಿಯಂತೆ ಜಮೀನಿನಲ್ಲಿ ಕಾಯುವಂತಾಗಿದೆ.

ಸಮಯ ನಿಗದಿ ಇಲ್ಲ

ಇತ್ತೀಚೆಗೆ ಬೆಸ್ಕಾಂನಿಂದ ನೀಡುವ ಅಲ್ಪ ಸ್ವಲ್ಪ ಸಮಯದ ವಿದ್ಯುತ್‌ಗೂ ಸರಿಯಾದ ವೇಳೆ ಗೊತ್ತುಪಡಿಸಿಲ್ಲ. ಮನಸೋ ಇಚ್ಛೆ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ಒಂದು ಗಂಟೆ ವಿದ್ಯುತ್ ನೀಡಿದರೆ ಅದರಲ್ಲಿ 10ಕ್ಕೂ ಹೆಚ್ಚು ಬಾರಿ ತೆಗೆದುಕೊಡುವ ಚಾಳಿ ರೂಢಿಸಿಕೊಂಡಿದ್ದಾರೆ. ಈ ರೀತಿ ವಿದ್ಯುತ್ ಪೂರೈಸಿದರೆ ವೋಲ್ಟೇಜ್ ಏರುಪೇರಾಗಿ ಮೋಟಾರ್‌ಗಳು ಸುಟ್ಟು ಹೋಗುತ್ತವೆ. ಕೇಬಲ್ ಬರ್ನ್ ಆಗುತ್ತದೆ. ಹೀಗಾಗಿ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಆಗುತ್ತಿರುವ ಸಮಸ್ಯೆ ಸರಿಪಡಿಸಬೇಕು ಎಂಬುದು ರೈತರ ಒಕ್ಕೊರಲ ಧ್ವನಿಯಾಗಿದೆ.

"ವಿದ್ಯುತ್ ಸಮಸ್ಯೆ ಇಲ್ಲ. ಆದರೆ ಕೆಲ ತಾಂತ್ರಿಕ ಕೆಲಸಗಳನ್ನು ಗುತ್ತಿಗೆದಾರರು ಮಾಡದೆ ಇರುವುದರಿಂದ ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಿ ಸಕಾಲಕ್ಕೆ ವಿದ್ಯುತ್ ಪೂರೈಕೆ ಮಾಡಬೇಕಿದೆ." - ಎಚ್.ಪಿ.ಲಕ್ಷ್ಮೀನಾರಾಯಣ, ಕೆಡಿಪಿ ಸದಸ್ಯ, ಗುಡಿಬಂಡೆ "ಸಾಲ ಮಾಡಿ ಆಲೂಗಡ್ಡೆ ಬಿತ್ತನೆ ಮಾಡಿದ್ದೇವೆ, ಈಗಾಗಲೇ 2 ತಿಂಗಳು ಮುಗಿದಿದ್ದು ಇನ್ನು ಒಂದು ತಿಂಗಳು ಇದ್ದರೆ ಬೆಳೆ ಉತ್ತಮವಾಗಿ ಬರುತ್ತದೆ. ಆದರೆ, ಈಗಲೇ ವಿದ್ಯುತ್ ಕಣ್ಣಾಮುಚ್ಚಾಲೇ ಆಡುತ್ತಿದೆ. ಬೆಳೆಗಳಿಗೆ ನೀರು ಪೂರೈಸಲು ಆಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ನಮಗೆ ವಿದ್ಯುತ್ ಪೂರೈಕೆ ಮಾಡಿ ಬೆಳೆ ಉಳಿಸಿಕೊಡಬೇಕು." - ಮನೋಜ್, ಹಳೇ ಗುಡಿಬಂಡೆ. ಯುವ ರೈತ