ಬೆಟ್ಟದಪುರ: ಸಹಕಾರ ಸಂಘವು ನೀಡುವ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದರಿಂದ ಸಂಘಕ್ಕೆ ಹೆಚ್ಚಿನ ಲಾಭಾಂಶ ಸಿಗಲಿದ್ದು ಸದಸ್ಯರಿಗೆ ಅನುಕೂಲವಾಗಲಿದೆ ಎಂದು ಬೆಟ್ಟದಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಟೇಲ್ ನಟೇಶ್ ಹೇಳಿದರು.
ಸಂಘದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳು ರೈತರಿಗೆ ಜೀವನಾಡಿ. ರೈತರಿಗೆ ಸಮಯಕ್ಕೆ ಬೇಕಾದ ಸಾಲ ಸೌಲಭ್ಯಗಳನ್ನು ನೀಡುವುದರ ಜತೆಗೆ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಕೆಲಸವನ್ನು ಸಹ ಮಾಡುತ್ತವೆ. ಈ ಬಾರಿ ಸಂಘವು 21,18,000 ರೂ.ಲಾಭ ಗಳಿಸಿದೆ ಎಂದರು.
ಸಂಘದ ಉಪಾಧ್ಯಕ್ಷ ಜಿ.ಆರ್.ಶಂಕರಶೆಟ್ಟಿ, ನಿರ್ದೇಶಕರಾದ ಬಿ.ಎನ್.ಗಿರೀಶ್, ಗಿರೀಗೌಡ, ಎ.ಸಿ.ಧರಣೇಶ್, ದಿಲೀಪ್, ಎಕ್ಬಾಲ್ ಷರೀಶ್, ಜಿ.ಎಸ್.ಹನುಮನಾಯಕ, ಶಿವಣ್ಣ, ಶಿವಯ್ಯ, ಸುಶೀಲಮ್ಮ, ಜಯಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ವಿಜಯ್, ಸಿಬ್ಬಂದಿ ಎನ್.ಶಿವ, ಜಿ.ಎಸ್.ಶಿವಕುಮಾರ್, ಸಿ.ಎನ್.ನಾಗಲತಾ, ಬಿ.ಕೆ ಪೂರ್ಣಿಮಾ, ಬಿ.ಎಸ್.ಉದಯ್, ಸದಸ್ಯರು ಇದ್ದರು.