ಕಾಗವಾಡ: ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳು ರೈತರಿಗೆ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಿ ಅನುಕೂಲ ಕಲ್ಪಿಸುತ್ತಿವೆ ಎಂದು ಜುಗೂಳ ವಿವಿಧೋದ್ದೇಶಗಳ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ ಹೇಳಿದರು.
ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶಗಳ ಪಿಕೆಪಿಎಸ್ ಸಂಘದ 104ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. 2022-23ನೇ ಸಾಲಿನಲ್ಲಿ ಸಂಘಕ್ಕೆ 75.13 ಲಕ್ಷ ರೂ.ನಿವ್ವಳ ಲಾಭವಾಗಿದ್ದು, ಸದಸ್ಯರಿಗೆ ಶೇ. 16 ಲಾಭಾಂಶ ವಿತರಿಸಲಾಗಿದೆ. 38.33 ಕೋಟಿ ರೂ. ದುಡಿಯುವ ಬಂಡವಾಳ, 25.38 ಕೋಟಿ ರೂ. ಸಾಲ ವಿತರಿಸಲಾಗಿದ್ದು, 22.56 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. 1.57 ಕೋಟಿ ರೂ. ಷೇರು ಬಂಡವಾಳ, ಸ್ವಂತ ನಿ 3.90 ಕೋಟಿ ರೂ. ಇದೆ. ಎಂದರು.
ಸ್ತ್ರೀ ಶಕ್ತಿ ಸಂಘಗಳಿಗೆ 17.38 ಲಕ್ಷ ರೂ. ಸಾಲ, ರೈತರಿಗಾಗಿ 14.70 ಲಕ್ಷ ರೂ ಸಾಲ ವಿತರಿಸಲಾಗಿದೆ. ಬೆಳೆಸಾಲ ಶೇ. 97.55 ಹಾಗೂ ಬಿಡಿಪಿ ಸಾಲ ವಸೂಲಾತಿ ಶೇ.90.22 ವಸೂಲಾತಿಯಾಗಿದೆ. ಸಂಘಕ್ಕೆ ಈ ಮೊದಲು 11.90 ಕೋಟಿ ರೂ.ಡಿಸಿಸಿಯಿಂದ ಸಾಲ ಮಂಜೂರಾಗುತ್ತಿತ್ತು. ಈ ಬಾರಿ 14.92 ಕೋಟಿ ರೂ. ಬಂದಿದೆ ಎಂದರು.
ನಿಂಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಇಒ ಚಿದಾನಂದ ಬೆಡಕಿಹಾಳೆ ವಾರ್ಷಿಕ ವರದಿ ಓದಿದರು. ಉಪಾಧ್ಯಕ್ಷ ಬಾಬಗೌಡ ಪಾಟೀಲ, ನಿರ್ದೇಶಕರಾದ ಶಿವಗೌಡ ಪಾಟೀಲ, ಮಾರುತಿ ಮಿಣಚೆ, ತಾತ್ಯಾಸಾಬ ಪಾಟೀಲ, ಅಶೋಕ ಸುಂಕೆ, ಸುಧಾಕರ ಗಣೇಶವಾಡಿ, ಬಾಬುರಾವ ಜಾಧವ, ನಾಗಪ್ಪ ಮಾಸೂಲೆ, ಜಯಪಾಲ ಯಮಕನಮರಡಿ, ಗೋಪಾಳ ಖೋತ, ಶಿವಾನಂದ ಕಡೋಲೆ, ತಾತ್ಯಾಸಾಬ ವಸವಾಡೆ, ಈರಗೌಡ ಪಾಟೀಲ, ಮಾಲತಿ ಪಾಟೀಲ, ಸೇವಂತಿ ಶಮನೇವಾಡಿ ಇತರರಿದ್ದರು.