ಹೆಬ್ರಿ ಸಮೀಪದ ಮುನಿಯಾಲಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾ ಘಟಕ ಸಭೆ ಜಿಲ್ಲಾಧ್ಯಕ್ಷ ಮುನಿಯಾಲು ಗೋಪಾಲ ಕುಲಾಲ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. 
ಜಿಲ್ಲೆ

ರೈತ ಸಂಘ ಬಲಪಡಿಸಲು ಚಿಂತನೆ

ಇಂದಿರಾ ಎನ್ ಕೆ

ಹೆಬ್ರಿ: ಉಡುಪಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಂಘಟನೆ ಮಾಡುವ ಮೂಲಕ ಕರ್ನಾಟಕ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾ ಘಟಕ ಬಲಪಡಿಸುವುದು, ಸದಸ್ಯತ್ವ ಅಭಿಯಾನ ನಡೆಸುವುದು, ರೈತರಿಗೆ ಮಾಹಿತಿ ಕಾರ್ಯಕ್ರಮ ನಡೆಸಿ ಸಂಘಟನೆ ಬಲಗೊಂಡ ಬಳಿಕ ರೈತರ ಸಮಾವೇಶ, ಕೃಷಿ ಮಾಹಿತಿ ಕಾರ್ಯಕ್ರಮ, ಕ್ರೀಡಾಕೂಡ ನಡೆಸಲಾಗುತ್ತದೆ ಎಂದು ಸಂಘದ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಮುನಿಯಾಲು ಗೋಪಾಲ ಕುಲಾಲ್ ಹೇಳಿದರು.

ಮುನಿಯಾಲಿನಲ್ಲಿರುವ ರೈತ ಸಂಘದ ಕಚೇರಿಯಲ್ಲಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಕಾರ್ಕಳ ತಾಲೂಕು ಘಟಕ ಅಧ್ಯಕ್ಷ ರೊನಾಲ್ಡ್ ವಲೇರಿಯನ್ ಲೋಬೋ, ರೈತ ಸಂಘವನ್ನು ಸಕ್ರಿಯಗೊಳಿಸಿ ಸಂಘಟನೆ ಮಾಡಿ ನಿರಂತರವಾಗಿ ರೈತರಿಗೆ ನೆರವಾಗುವ ಕಾರ್ಯಕ್ರಮ ನೀಡುವಂತೆ ಸಲಹೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘದ ಹೆಬ್ರಿ ಕಾರ್ಕಳ ತಾಲೂಕು ಘಟಕದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.