ತುಂಗಭದ್ರಾ ಜಲಾಶಯದಿಂದ ಎಚ್‌ಎಲ್ಸಿ ಹಾಗೂ ಎಲ್ಎಲ್ಸಿ ಕಾಲುವೆಗಳ ಉಪ ಕಾಲುವೆಗಳಿಗೆ ಕುಡಿಯುವ ನೀರು ಹರಿಸುವಂತೆ ಒತ್ತಾಯಿಸಿ ರೈತರು ಬುಧವಾರ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಜಿ.ಪುರುಷೋತ್ತಮಗೌಡ, ಟಿ.ರಂಜಾನ್ ಸಾಬ್, ಕೊಂಚಿಗೇರಿ ಮಲ್ಲಮ್ಮ, ಶ್ರೀಧರಗಡ್ಡೆ ವೀರನಗೌಡ ಇತರರಿದ್ದರು.  
ಜಿಲ್ಲೆ

ಕಾಲುವೆಗೆ ನೀರು ಹರಿಸಲು ರೈತರು ಒತ್ತಾಯ

ಬಳ್ಳಾರಿ : ತುಂಗಭದ್ರಾ ಜಲಾಶಯದಿಂದ ಎಚ್‌ಎಲ್ಸಿ ಹಾಗೂ ಎಲ್ಎಲ್ಸಿ ಕಾಲುವೆಗಳ ಉಪ ಕಾಲುವೆಗಳಿಗೆ ಕುಡಿಯುವ ನೀರು ಹರಿಸುವಂತೆ ಒತ್ತಾಯಿಸಿ ರೈತರು ಬುಧವಾರ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದರು.

ಆಂಧ್ರ ಪ್ರದೇಶದ ರೈತರಿಗೆ ಎಚ್‌ಎಲ್ಸಿ ಹಾಗೂ ಎಲ್ಎಲ್ಸಿ. ಮುಖ್ಯ ಕಾಲುವೆಗಳ ಮುಖಾಂತರ ಜು.28ರಿಂದ ನೀರು ಬಿಡಲಾಗಿದೆ. ಆದರೆ ಸ್ಥಳೀಯ ರೈತರಿಗೆ ನೀರು ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಕೆರೆಗಳು ಬತ್ತಿ ಹೋಗಿ ಗ್ರಾಮ ಮತ್ತು ಪಟ್ಟಣಗಳಲ್ಲಿ ಕುಡಿಯುವ ನೀರು ಇಲ್ಲದೆ ಜನ, ಜಾನುವಾರುಗಳಿಗೆ ಸಂಕಷ್ಟವಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತಾತ್ವಾರ ಉಲ್ಬಣಿಸಿದೆ. ರೈತರು ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದು, ಬಿತ್ತನೆ ಕಾರ್ಯ ಶುರುವಾಗಿದೆ. ಬಿತ್ತನೆ ಮಾಡಿದವರಿಗೆ ನೀರಿನ ಕೊರತೆ ಕಾಡುತ್ತಿದೆ. ಕೆನಾಲ್‌ಗಳಲ್ಲಿ ನೀರು ಹರಿದರೆ ರೈತರು ಬದುಕುತ್ತಾರೆ. ಇಲ್ಲದಿದ್ದರೆ ಬಹಳಷ್ಟು ಸಮಸ್ಯೆ ಆಗಲಿದೆ ಎಂದು ರೈತರು ಅಳಲು ತೋಡಿಕೊಂಡರು.

ತಕ್ಷಣವೇ ಕಲಬುರಗಿ ಪ್ರಾದೇಶಿಕ ಆಯುಕ್ತರು ಮತ್ತು ತುಂಗಭದ್ರಾ ಜಲಾಶಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಲಾಶಯದ ಎಚ್‌ಲ್‌ಸಿ ಹಾಗೂ ಎಲ್ಎಲ್ಸಿ ಮುಖ್ಯ ಕಾಲುವೆಯಿಂದ ಉಪ ಕಾಲುವೆಗಳಿಗೆ ಕುಡಿಯುವ ನೀರು ಬಿಡಿಸಬೇಕೆಂದು ಮನವಿ ಮಾಡಿದರು.

ರೈತ ಮುಖಂಡರಾದ ಜಿ.ಪುರುಷೋತ್ತಮಗೌಡ, ಟಿ.ರಂಜಾನ್ ಸಾಬ್, ಕೊಂಚಿಗೇರಿ ಮಲ್ಲಮ್ಮ, ಶ್ರೀಧರಗಡ್ಡೆ ವೀರನಗೌಡ, ಕಡತಿನಿ ಪಂಪಾಪತಿ, ಬಸವರಾಜ ಸ್ವಾಮಿ, ವೀರಭದ್ರರಾವ್, ಮಲ್ಲಾರೆಡ್ಡಿ, ವೀರಾಪುರ ಬಸನಗೌಡ, ನಾಗೇಂದ್ರಪ್ಪ, ಖಾಜಾಸಾಬ್, ಸಂಗನಕಲ್ಲು ದೊಡ್ಡದಾಸಪ್ಪ ಮತ್ತಿತರರು ಪಾಲ್ಗೊಂಡಿದ್ದರು.