ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಹಾಗೂ ಆಧಾರ್ ಕಾರ್ಡ್ ಲಿಂಗ ಮಾಡುವ ಹೆಸ್ಕಾಂ ಕ್ರಮ ವಿರೋಧಿಸಿ ಮುಧೋಳದಲ್ಲಿ ತಾಲೂಕಿನ ರೈತರು ಬುಧವಾರ ಪ್ರತಿಭಟನೆ ನಡೆಸಿದರು. ಬಸವಂತ ಕಾಂಬಳೆ, ಹನುಮಂತ ನಬಾಬ್, ರಮೇಶ ಹೂಗಾರ, ದುಂಡಪ್ಪ ಯರಗಟ್ಟಿ ಇತರರಿದ್ದರು. 
ಜಿಲ್ಲೆ

ಹೆಸ್ಕಾಂ ವಿರುದ್ಧ ರೊಚ್ಚಿಗೆದ್ದ ರೈತರು

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಹಾಗೂ ಆಧಾರ್ ಕಾಡ್ ಲಿಂಕ್ ಮಾಡುವ ಕ್ರಮ ವಿರೋಧಿಸಿ ತಾಲೂಕಿನ ರೈತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಹಲವಾರು ರೈತರು ಹೆಸ್ಕಾಂ ವಿರುದ್ಧ ವಿವಿಧ ಘೋಷಣೆ ಕೂಗುತ್ತ ಜಾಥಾ ನಡೆಸಿದರು. ಬಳಿಕ ಹೆಸ್ಕಾಂ ಕಚೇರಿ ಮುಂಭಾಗದಲ್ಲಿ ಸೇರಿದ ರೈತರು, ಪಂಪಸೆಟ್‌ಗಳಿಗೆ ಮೀಟರ್ ಅಳವಡಿಕೆ, ಆಧಾರ್ ಕಾರ್ಡ್ ಲಿಂಕ್ ಮಾಡಬಾರದೆಂದು ಆಗ್ರಹಿಸಿದರು.

ಕರ್ನಾಟಕ ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ಉತ್ತರ ಕರ್ನಾಟಕ ಮುಳುಗಡೆ ಮತ್ತು ಪ್ರವಾಹ ಸಂತ್ರಸ್ತರ ರಕ್ಷಣಾ ಸಮಿತಿಗಳು ಪ್ರತಿಭಟನೆ ನೇತೃತ್ವ ವಹಿಸಿದ್ದವು.

ಬಸವಂತ ಕಾಂಬಳೆ, ಹನುಮಂತ ನಬಾಬ್, ರಮೇಶ ಹೂಗಾರ, ದುಂಡಪ್ಪ ಯರಗಟ್ಟಿ, ಮಹೇಶಗೌಡ ಪಾಟೀಲ, ನಾಗೇಶ ಬೋಳಶೆಟ್ಟಿ ಸೇರಿ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.