ಬೂದಿಕೋಟೆ: ತಾಲೂಕಿನ ಗಡಿಭಾಗದ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಬೆಳೆದ ಬೆಳೆ ಹಾಳಾಗಿ ಲಕ್ಷಾಂತರ ರೂ. ನಷ್ಟು ಉಂಟಾಗಿದೆ. ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಅರಣ್ಯ ಇಲಾಖೆಗೆ ರೈತರು ಒತ್ತಾಯ ಮಾಡಿದ್ದಾರೆ.
ಬಂಗಾರಪೇಟೆ ತಾಲೂಕಿನ ಗಡಿಭಾಗದ ಗ್ರಾಮಗಳಾದ ಚತ್ತಗುಟ್ಟಹಳ್ಳಿ, ಬತ್ಲಹಳ್ಳಿ, ತಳೂರು ಮತ್ತು ಸಾಕರಸನಹಳ್ಳಿ ಸೇರಿ ಸುತ್ತಮುತ್ತಲಿನ ಅನೇಕ ಗ್ರಾಮಗಳಿಗೆ ಕಾಡಾನೆಗಳು ಲಗ್ಗೆ ಇಟ್ಟು ಬೆಳೆ ನಾಶ ಮಾಡಿವೆ. ಬತ್ಲಗಳ್ಳಿಯ ಮಂಜುನಾಥ್ ಅವರ ಟೊಮ್ಯಾಟೊ, ತಳೂರು ಗ್ರಾಮದ ರೈತ ವೆಂಕಟೇಶ್ ಟೊಮ್ಯಾಟೊ, ಸಾಕರಸನಹಳ್ಳಿ ಗ್ರಾಮದ ಮಂಜುನಾಥ್ ಅವರು ಬೆಳೆದ ಬಾಳೆ ಸೇರಿ ಇತರೆ ಬೆಳೆಗಳನ್ನು ನಾಶ ಮಾಡಿವೆ. ಬರಗಾಲದ ನಡುವೆ ರೈತರು ಸಾಲ ಸೋಲ ಮಾಡಿ ಬಿತ್ತನೆ ಮಾಡಿ ಪೋಷಣೆ ಮಾಡಿದ ಬೆಳೆಗಳನ್ನು ಕಾಡಾನೆಗಳು ನಾಶ ಮಾಡಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸೋಲಾರ್ ಫೆನ್ಸಿಂಗ್ ಅಳವಡಿಕೆ ಮಾಡದ ಕಾರಣ ಕಾಡಾನೆಗಳು ಪದೇಪದೆ ಲಗ್ಗೆ ಇಟ್ಟು ಬೆಳೆಗಳನ್ನು ನಾಶ ಮಾಡುತ್ತಿವೆ. ಆದ್ದರಿಂದ ಬಾಕಿ ಇರುವ 3ಕಿಮೀ ವ್ಯಾಪ್ತಿಯಲ್ಲಿ ಸೋಲಾರ್ ೆನ್ಸಿಂಗ್ ಅಳವಡಿಸಿ ಬೆಳೆ ನಷ್ಟವಾದ ರೈತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ರೈತರು ಒತಾಯಿಸಿದ್ದಾರೆ.
"ಬಂಗಾರಪೇಟೆ ಗಡಿ ಭಾಗದಲ್ಲಿ ಬೀಡು ಬಿಟ್ಟಿದ್ದ 12 ಆನೆಗಳನ್ನು ಕಾರ್ಯಾಚರಣೆ ಮೂಲಕ ತಮಿಳುನಾಡು ಅರಣ್ಯ ಪ್ರದೇಶಕ್ಕೆ ಓಡಿಸಲಾಗಿತ್ತು. ಇದೀಗ 2 ಆನೆಗಳು ಮತ್ತೆ ಕಾಣಿಸಿಕೊಂಡಿದ್ದು, ಅವುಗಳನ್ನು ಸಹ ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹಗಲು ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆನೆ ದಾಳಿಯಿಂದ ಬೆಳೆ ನಾಶವಾದ ರೈತರಿಗೆ ಪರಿಶೀಲನೆ ನಡೆಸಿ ಪರಿಹಾರ ನೀಡಲು ಒತ್ತು ನೀಡಲಾಗುವುದು."
- ಶ್ರೀಲಕ್ಷಿ
ವಲಯ ಅರಣ್ಯ ಅಕಾರಿ