ಮುದ್ದೇಬಿಹಾಳ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ವೈಪರೀತ್ಯದಿಂದ ತೊಗರಿ ಬೆಳೆಯ ಹೂ ಮತ್ತು ಕಾಯಿ ಉದುರುತ್ತಿರುವುದು ಕಂಡು ಬರುತ್ತಿದೆ. ಬಾಧಿತ ರೈತರು ಬೆಳೆ ವಿಮೆ ನೋಂದಣಿ ರಶೀದಿ, ಜಿಪಿಎಸ್ ೋಟೊ, ದೂರವಾಣಿ ಸಂಖ್ಯೆ ಸಮೇತ ಅರ್ಜಿಯನ್ನು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ವಿಮಾ ಸಂಸ್ಥೆಯ ಪ್ರತಿನಿಧಿಗೆ ಸಲ್ಲಿಸಬೇಕು.
ಮುದ್ದೇಬಿಹಾಳ ತಾಲೂಕಿಗೆ ಮಾಂತಗೌಡ ಬಿರಾದಾರ (ಮೋ:9591090583) ಮತ್ತು ತಾಳಿಕೋಟೆ ತಾಲೂಕಿಗೆ ಭೀಮಾಶಂಕರ ಗುಡದಿನ್ನಿ (ಮೋ:6362835089) ವಿಮಾ ಪ್ರತಿನಿಧಿಗಳಾಗಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುರೇಶ ಭಾವಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.