ಜಿಲ್ಲೆ

ರೈತ ಮಹಿಳೆಯರಿಗೆ ಶೇ. 6ರಷ್ಟು ಸಹಾಯಧನ

Kopala - Raveendra V K

ಕೊಪ್ಪಳ: ರೈತ ಮಹಿಳೆಯರಿಗೆ ಪ್ರೋತ್ಸಾಹಿಸಲು ಹಸು, ಎಮ್ಮೆ ಸಾಲ ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಶೇ.6ರಷ್ಟು ಸಹಾಯಧನ ನೀಡುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

2024-25ನೇ ಸಾಲಿನಲ್ಲಿ ರಾಷ್ಟ್ರೀಕೃತ ಗ್ರಾಮೀಣ ಹಾಗೂ ಸಹಕಾರ ಬ್ಯಾಂಕ್​ಗಳಿಂದ ಹೈನುಗಾರಿಕೆಗಾಗಿ ನಿಡಲಾದ ಗರಿಷ್ಠ 65 ಸಾವಿರ ರೂ.ಸಾಲಕ್ಕೆ ಶೇ.6ರಷ್ಟು ವಾರ್ಷಿಕ ಬಡ್ಡಿ ಗರಿಷ್ಠ 3,625 ರೂ. ಸಹಾಯಧನ ಆಯ್ಕೆಯಾದ ಪ್ರತಿ ಫಲಾನುಭವಿಗೆ ನೀಡಲಾಗುತ್ತಿದೆ. ಮಾಹಿತಿಗಾಗಿ ರೈತ ಮಹಿಳೆಯರು ಆಯಾ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಅಥವಾ ಪಶು ಆಸ್ಪತ್ರೆ ಸಂಪರ್ಕಿಸುವಂತೆ ಪಶುಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ ಮಲ್ಲಯ್ಯ ತಿಳಿಸಿದ್ದಾರೆ.