ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸಿಂಧನೂರು ತಾಲೂಕಿನ ಶ್ರೀಪುರಂಜಂಕ್ಷನ್‌ನ ಹತ್ತಿರ ರಸ್ತೆ ಸಂಚಾರ ತಡೆ ನಡೆಸಿದರು. 
ಜಿಲ್ಲೆ

ರೈತರ ಮೇಲಿನ ದೌರ್ಜನ್ಯ ಖಂಡಿಸಿ ಸಿಂಧನೂರಲ್ಲಿ ಸಂಚಾರ ತಡೆ

ಸಿಂಧನೂರು: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ಜಂಟಿ ಸಂಘಟನೆಗಳೊಂದಿಗೆ ತಾಲೂಕಿನ ಶ್ರೀಪುರಂಜಂಕ್ಷನ್‌ನ ಹತ್ತಿರ ಶುಕ್ರವಾರ ಸಂಚಾರ ತಡೆ ನಡೆಸಿ ಪ್ರತಿಭಟಿಸಿತು.

ದೇಶಾದ್ಯಂತ ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ದೆಹಲಿಗೆ ಹೊರಟಿರುವ ರೈತರ ಮೇಲೆ ಟಯರ್‌ಗ್ಯಾಸ್, ವಾಟರ್ ಕಾನನ್ ಮತ್ತು ಲಾಠಿ ಚಾರ್ಜ್ ಮೂಲಕ ಪೊಲೀಸರು ದೌರ್ಜನ್ಯ ನಡೆಸುತ್ತಿರುವುದು ಖಂಡನೀಯವಾಗಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಸಂಘಟನೆ ಮುಖಂಡರಾದ ರಂಗಪ್ಪ, ಶಂಕ್ರಪ್ಪ, ಯಂಕಪ್ಪ ಕೆಂಗಲ್, ಶೇಕ್ಷಾಖಾದ್ರಿ, ಎಸ್.ದೇವೇಂದ್ರಗೌಡ, ಚಂದ್ರಶೇಖರ ಗೊರೇಬಾಳ, ನಾಗರಾಜ ಪೂಜಾರ, ಪ್ರಮುಖರಾದ ಶಿವರಾಜ್ ಸಾಸಲಮರಿ, ಗರಿಬಸಾಬ ಕೊಡ್ಲಿ, ಜಾನ್, ಮಲ್ಲಿಕಾರ್ಜುನ, ಅಳ್ಳೆಪ್ಪ, ಸಿದ್ದಪ್ಪ, ಶಾಂತರಾಜ್, ಚಂದ್ರಪ್ಪ ಇದ್ದರು.