ಶಿಗ್ಗಾಂವಿ: ಸಾಲ ಬಾಧೆ ತಾಳಲಾರದೆ ಇಂಗು ಗುಂಡಿಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಬಸವರಾಜ ಶಿವಪ್ಪ ಗೂಳಣ್ಣವರ (58) ಮೃತ ರೈತ. ಮೂರು ಎಕರೆ ಜಮೀನು ಹೊಂದಿದ್ದ ಬಸವರಾಜ ಗೂಳಣ್ಣವರ ಹೋತನಹಳ್ಳಿ ಸೊಸೈಟಿಯಲ್ಲಿ 50 ಸಾವಿರ ರೂ. ಹಾಗೂ ಕೈಗಡ 2 ಲಕ್ಷ ರೂ. ಸಾಲ ಪಡೆದಿದ್ದರು. ಎರಡು ವರ್ಷದಿಂದ ಸರಿಯಾಗಿ ಬೆಳೆ ಬಾರದ ಕಾರಣ ಸಾಲ ಮರುಪಾವತಿಸಲಾಗದೇ ಮನನೊಂದಿದ್ದರು. ಬುಧವಾರ ಬೆಳಗ್ಗೆ ಗ್ರಾಮ ಪಂಚಾಯಿತಿ ಆವರಣದ ಇಂಗು ಗುಂಡಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.