ಗಂಗಾವತಿ: ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ತಾಲೂಕು ಕೃಷಿಕ ಸಮಾಜ ಪದಾಧಿಕಾರಿಗಳ ಆಯ್ಕೆ ಸಭೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಚನ್ನಪ್ಪ ಮಳಗಿ(ಅಧ್ಯಕ್ಷ), ರಮೇಶ ಕುಲ್ಕರ್ಣಿ ಮರಳಿ (ಉಪಾಧ್ಯಕ್ಷ), ಮಲ್ಲೇಶಪ್ಪ ಹೊಸಳ್ಳಿ (ಪ್ರಧಾನ ಕಾರ್ಯದರ್ಶಿ), ಕುಮಾರೆಪ್ಪ ಸಿಂಗನಾಳ (ಖಜಾಂಚಿ), ಅಮರೇಶ ಗೋನಾಳ್ (ಜಿಲ್ಲಾ ಪ್ರತಿನಿಧಿ) ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: 28, 29ರಂದು ಕೃಷಿ ಮೇಳ
ನಂತರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ ಮಾತನಾಡಿ, ಕೃಷಿ ಚಟುವಟಿಕೆ ಉತ್ತೇಜನ ಕಾರ್ಯಕ್ರಮಗಳಲ್ಲಿ ಪದಾಧಿಕಾರಿಗಳ ಸಲಹೆ ಪಡೆಯಲಾಗುವುದು ಎಂದರು. ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಇಲಾಖೆ ಸಿಬ್ಬಂದಿ ಮತ್ತು ಸದಸ್ಯರಿದ್ದರು.