ಧಾರವಾಡ: ವರ್ಷವಿಡೀ ಉಣ್ಣಲು ಸಾಂಪ್ರದಾಯಿಕ ಬೆಳೆಗಳು ಹಾಗೂ ಮಾರಾಟಕ್ಕಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಜೊತೆಗೆ ರೈತರು ಬೀಜೋತ್ಪಾದನೆಗೂ ಆದ್ಯತೆ ನೀಡಿ ಸ್ವಾವಲಂಬಿಗಳಾಗಬೇಕು ಎಂದು ಭಾರತೀಯ ಬೀಜ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಸಂಜಯಕುಮಾರ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳದಲ್ಲಿ ಬೀಜ ಮೇಳವನ್ನು ಭಾನುವಾರ ಉದ್ಘಾಟಿಸಿ ಅವರು ಮÁತನಾಡಿದರು.
ದೇಶದ ಜನಸಂಖ್ಯೆ ಏರುಮುಖವಾಗುತ್ತಿರುವ ಈ ಸಂದರ್ಭದಲ್ಲಿ ಆಹಾರ ಭದ್ರತೆ ಪ್ರಮುಖವಾಗಿದೆ. ಜೊತೆಗೆ ಬಿತ್ತನೆ ಬೀಜ ಭದ್ರತೆಗೂ ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ. ದೇಶದಲ್ಲಿ ಬೀಜೋತ್ಪಾದನೆ ಮತ್ತು ಮರಾಟದ ವಹಿವಾಟು ಪ್ರತಿವರ್ಷ ಅಂದಾಜು ೮೦ ಸಾವಿರ ಕೋಟಿ ರೂ.ಗಳಷ್ಟಿದ್ದು, ಇದನ್ನು ಕೃಷಿಯೇತರರು ಮಾಡುತ್ತಿದ್ದಾರೆ ಎಂದರು.
ರಾಷ್ಟಿçÃಯ ಸಸ್ಯ ತಳಿಗಳ ಸಂರಕ್ಷಣೆ ರೈತರ ಹಕ್ಕುಗಳ ಪ್ರಾಽಕಾರದ ನಿರ್ದೇಶಕ ಡಾ. ಆರ್.ಆರ್. ಹಂಚಿನಾಳ ಮÁತನಾಡಿ, ವಿಜ್ಞಾನಿಗಳ ಶ್ರಮ ರೈತರಿಗೆ ತಲುಪಬೇಕು. ಅತಿಯÁದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಅವಲಂಬನೆಯಿAದ ಭೂಮಿ ಕಲುಷಿತಗೊಳ್ಳುತ್ತಿದೆ. ಮನುಕುಲಕ್ಕೆ ಅನ್ನವನಿಕ್ಕುವೆ ಭೂತಾ¬ಗೆ ವಿಷ ಉಣಿಸುವುದು ಯÁವ ನ್ಯಾಯ? ಎಂದರು.
ಕೃಷು ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸಮÁಜದ ಅಧ್ಯಕ್ಷ ಬಸವರಾಜ ಕುಂದಗೋಳ, ಡೀನ್ ಬಿ.ಡಿ. ಬಿರಾದಾರ, ವಿಸ್ತರಣಾ ನಿರ್ದೇಶಕ ಎಸ್.ಎಸ್. ಅಂಗಡಿ, ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಶ್ರೀನಿವಾಸ ಕೋಟ್ಯಾನ್, ಗೋವಿಂದರಾಜ, ಇತರರಿದ್ದರು.