ಸಿಂಧನೂರು: ಕೃಷಿ ಪಂಪಸೆಟ್‌ಗಳಿಗೆ 12 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಜಿಲ್ಲಾ ಹಾಗೂ ತಾಲೂಕು ಘಟಕ ಗುರುವಾರ ಜೆಸ್ಕಾಂ ಎಇಇ ದೌಲಸಾಬಗೆ ಮನವಿ ಸಲ್ಲಿಸಿತು.
ಜವಳಗೇರಾ ಹೋಬಳಿ ವ್ಯಾಪ್ತಿಯ ಸುಲ್ತಾನಪುರ, ಜಂಗಮರಹಟ್ಟಿ, ಶ್ರೀನಿವಾಸಕ್ಯಾಂಪ್ ರೈತರ ಪಂಪಸೆಟ್‌ಗಳಿಗೆ ಕೇವಲ 7 ತಾಸು ವಿದ್ಯುತ್ ಪೂರೈಕೆಯಾಗುತ್ತಿದೆ. ಇದರಲ್ಲಿ ಹತ್ತು ಬಾರಿ ಹೋಗಿ ಬರುತ್ತದೆ. ರೈತರು ಭತ್ತ ನಾಟಿಗೆ ಸಸಿ ಮಡಿ ಹಾಕಿಕೊಂಡಿದ್ದು, ನೀರಿನ ಕೊರತೆ ಎದುರಾಗಲಿದೆ. ಕೆಲವೆಡೆ ರೈತರ ಪಂಪ್‌ಸೆಟ್‌ಗಳಿಗೆ 10-12 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಪ್ರಭಾವಿ ಹಾಗೂ ರಾಜಕಾರಣಿಗಳ ಜಮೀನು ವ್ಯಾಪ್ತಿಯಲ್ಲೂ ಪೂರ್ಣ ಪ್ರಮಾಣದ ವಿದ್ಯುತ್ ನೀಡಲಾಗುತ್ತಿದೆ. ಕೂಡಲೇ 12 ತಾಸು ನಿರಂತರ ವಿದ್ಯುತ್ ಪೂರೈಕೆಗೆ ಮುಂದಾಗಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪ ಮರಳಿ, ಉಪಾಧ್ಯಕ್ಷ ರಾಮಯ್ಯ ಜವಳಗೇರಾ, ತಿಮ್ಮಣ್ಣ ಭೋವಿ, ತಾಲೂಕು ಅಧ್ಯಕ್ಷ ಶಿವರಾಜ ಮಾರಲದಿನ್ನಿ, ಸಲಿಂ ಪಟೇಲ್, ನಾಗರಾಜ ಸೋಮಲಾಪುರ, ಕಾರ್ಯದರ್ಶಿ ರಾಘವೇಂದ್ರ ಹೆಡಗಿನಾಳ, ಹುಲುಗಯ್ಯ ತಿಮ್ಮಾಪುರ ಇದ್ದರು.