ಕೊಳ್ಳೇಗಾಲ: ಸತ್ತೇಗಾಲ ಗ್ರಾಮದಲ್ಲಿ ಅಪೂರ್ಣ ಹಂತದಲ್ಲಿರುವ ವಿದ್ಯುತ್ ಲೈನ್‌ಗೆ ಟಿಸಿ ಚಾರ್ಜ್ ಮಾಡಲು ಮುಂದಾಗಿದ್ದ ಸೆಸ್ಕ್ ಜೆಇ ಹಾಗೂ ಸಿಬ್ಬಂದಿ ಕೆಲಸವನ್ನು ವಿರೋಧಿಸಿ ರೈತನೊಬ್ಬ ಟಿ.ಸಿ ಕಂಬ ಏರಿ ಬುಧವಾರ ಪ್ರತಿಭಟಿಸಿದರು.
ಜೆ.ಇ ಮಹದೇವಸ್ವಾಮಿ ಹಾಗೂ ಲೈನ್‌ಮ್ಯಾನ್‌ಗಳು ಪಂಪ್‌ಸೆಟ್ ಜಮೀನಿಗೆ 11 ಕೆವಿ ವಿದ್ಯುತ್ ಸಂಪರ್ಕ ನೀಡಲು ಎಳೆಯಲಾಗಿದ್ದ ವಿದ್ಯುತ್‌ಲೈನ್ ಅಪೂರ್ಣ ಸ್ಥಿತಿಯಲ್ಲಿದ್ದರೂ ಟಿಸಿ ಚಾರ್ಚ್ ಮಾಡಲು ಮುಂದಾಗಿದ್ದಾರೆ ಎಂದು ರೈತ ಶಶಿಕುಮಾರ್ ಟಿಸಿ ಕಂಬ ಏರಿ ಸೆಸ್ಕ್ ಅಧಿಕಾರಿಗಳ ಕಾರ್ಯವನ್ನು ಖಂಡಿಸಿ ಅಕ್ರೋಶ ವ್ಯಕ್ತಪಡಿಸಿದರು.
ಈ ಘಟನಾವಳಿಯನ್ನು ಶಶಿಕುಮಾರ್ ಅವರು ತಾವೇ ಖುದ್ದು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು. ಜೆಇ ಮಹದೇವಸ್ವಾಮಿ ಅವರನ್ನು ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ನಂತರ ಟಿಸಿ ಚಾರ್ಜ್ ಮಾಡಿ, ಇಲ್ಲವೆ ನಾನು ಮೇಲೆ ಇರುತ್ತೇನೆ. ಹೀಗೆ ಚಾರ್ಜ್ ಮಾಡಿ ಎಂದು ಪಟ್ಟು ಹಿಡಿದಿದ್ದಾನೆ. ನಿಮ್ಮ ಮೇಲಾಧಿಕಾರಿಗಳಿಗೂ ಈ ಬಗ್ಗೆ ತಿಳಿಸಿದ್ದೇನೆ. ಆಗಿದ್ದರೂ ಚಾರ್ಜ್ ನೀಡಲು ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಜೆಇ ಮಹದೇವಸ್ವಾಮಿ ಅವರು ಸಹ ಕೈಯಲ್ಲಿ ಮೊಬೈಲ್ ಹಿಡಿದು ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದೀಯಾ? ನಾವು ಪೊಲೀಸ್ ಸ್ಟೇಷನ್‌ಗೆ ಹೋಗುತ್ತೇನೆ. ಕಂಬದಲ್ಲಿದ್ದ ವಿದ್ಯುತ್‌ತಂತಿ ಪಿನ್ ಅನ್ನು ನೀನೇ ಕಳಚಿದ್ದಿಯಾ, ನಿನ್ನ ವಿರುದ್ಧ ಇಲಾಖೆಗೆ ಪತ್ರ ಬರೆಯುತ್ತೇನೆ ಎಂದು ಜೆಇ ಮಹದೇವಸ್ವಾಮಿ ಪ್ರತಿಕ್ರಿಯಿಸಿದ್ದು. ಇವಬ್ಬರಿಬ್ಬರ ಈ ಎಲ್ಲ ಸಂಭಾಷಣೆಗಳು ವಿಡಿಯೋದಲ್ಲಿ ರೆಕಾರ್ಡ್ ಆಗಿವೆ.