ಬ್ಯಾಡಗಿ: ಸಾಲ ಬಾಧೆಯಿಂದ ಮನನೊಂದು ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ಯಾಡಗಿ ಎಪಿಎಂಸಿ ವಾಣಿಜ್ಯ ಮಳಿಗೆಯಲ್ಲಿ ಸೋಮವಾರ ಜರುಗಿದೆ.
ಮೃತನನ್ನು ಶಿಡೇನೂರು ಗ್ರಾಮದ ಶಿವಾಜಿನಗರದ ಶಂಭನಗೌಡ್ರ ಮಲ್ಲನಗೌಡ್ರ ಬಿದರಕಟ್ಟಿ (45) ಎನ್ನಲಾಗಿದೆ. ಇವರು ಮೂಲತಃ ಕೃಷಿಕರಾಗಿದ್ದು, ಬ್ಯಾಡಗಿ ಕೆಸಿಸಿ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘ, ಮಿಲಾಗ್ರಿಸ್ ಬ್ಯಾಂಕ್ಗಳಲ್ಲಿ 7 ಲಕ್ಷಕ್ಕೂ ಅಧಿಕ ಸಾಲ ಮಾಡಿರುವುದಾಗಿ ತಿಳಿದುಬಂದಿದೆ. ಪ್ರಸಕ್ತ ವರ್ಷ ಗೋವಿನ ಜೋಳ ಹಾಗೂ ಕ್ಯಾಬೀಜ್ ಬೆಳೆ ಬಾರದೆ ನೊಂದುಕೊಂಡಿದ್ದರೆಂದು ಕುಟುಂಬದ ಮೂಲಗಳು ತಿಳಿಸಿವೆ. ಈಚೆಗೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ಇವರು ತನ್ನ ಮಳಿಗೆಯಲ್ಲೇ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.