ಬುಕ್ಕಾಪಟ್ಟಣ: ಗ್ರಾಮೀಣ ಪ್ರದೇಶದ ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ವಾಡಿ, ಅವರಿಗೆ ಬೇಕಾದ ಎಲ್ಲ ಅನುಕೂಲಗಳನ್ನು ವಾಡಿಕೊಡುವ ಮೂಲಕ ರೈತರ ಮಿತ್ರರಂತೆ ಕೆಲಸ ವಾಡುತ್ತಿವೆ ಕೃಷಿ ಪತ್ತಿನ ಸಹಕಾರ ಸಂಗಳು ಎಂದು ರಾಮಲಿಂಗಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಅಧ್ಯಕ್ಷ ಕೆ.ಮುಕುಂದಪ್ಪ ಹೇಳಿದರು.
ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ರಾಮಲಿಂಗಾಪುರದಲ್ಲಿ ಆಯೋಜಿಸಿದ್ದ ಸಹಕಾರ ಸಂದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ವಾತನಾಡಿ, ಕೇವಲ ತಾಲೂಕು ಮಟ್ಟದಲ್ಲಿ ಇದ್ದಂತ ಕೃಷಿ ಪತ್ತಿನ ಸಹಕಾರ ಸಂಗಳನ್ನು ಇಂದು ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲಿಯೂ ತೆರೆದು ರೈತರ ನೆರವಿಗೆ ಬರುತ್ತಿವೆ ಎಂದರು.
ಸಂಘದ ನಿರ್ದೇಶಕ ಕರೆ ವಾದನಹಳ್ಳಿ ನಾಗರಾಜು ವಾತನಾಡಿ, ರೈತ ದೇಶದ ಬೆನ್ನೆಲುಬು. ರೈತನಿಗೆ ಸಂಕಷ್ಟ ಬಂದಾಗ ರಾಷ್ಟ್ರೀಕೃತ ಬ್ಯಾಂಕ್‌ಗಳು ಅವರ ನೆರವಿಗೆ ನಿಲ್ಲುತ್ತಿರಲಿಲ್ಲ. ಇದನ್ನು ಮನಗಂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಳು ಬೆಳೆದ ನಿಂತಿದೆ. ಇದನ್ನು ಎಲ್ಲರೂ ಸದುಪಯೋಗಿಸಬೇಕು ಎಂದರು.
ಮುಖಂಡರಾದ ದೇವರಾಜು, ವಾದೇನಹಳ್ಳಿ ಲೋಕೇಶ್, ಬಸವರಾಜ, ಲಕ್ಷ್ಮಕ್ಕ, ಸಿಒ ರಾಜಣ್ಣ, ಬಸವರಾಜು, ತಿಪ್ಪೇಸ್ವಾಮಿ, ಲಕ್ಷ್ಮೀ ರಂಗಪ್ಪ, ಶಿವಣ್ಣ ರಾಮಲಿಂಗಾಪುರ ವ್ಯಾಪ್ತಿಯ ರೈತರು, ಸಂದ ಸದಸ್ಯರು, ನಿರ್ದೇಶಕರು, ಗ್ರಾಮಸ್ಥರು ಇದ್ದರು.