ಜಿಲ್ಲೆ

ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕ ಸಾವು

reportermys

ಮಡಿಕೇರಿ: ಅಲ್ಯೂಮಿಣಿಯಂ ಏಣಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಚೆಂಬು ಗ್ರಾಮದಲ್ಲಿ ಬುಧವಾರ ನಡೆದಿದೆ.


ಊರುಬೈಲು ನಡುಮನೆ ಎನ್.ಡಿ.ದಾಸಪ್ಪ ಮೃತಪಟ್ಟ ದುರ್ದೈವಿ.


ದಾಸಪ್ಪ ಎಂದಿನಂತೆ ತಮ್ಮ ತೋಟದಲ್ಲಿ ಬುಧವಾರ ಕಾಳು ಮೆಣಸು ಕೊಯುತ್ತಿದ್ದ ಸಂದರ್ಭ ಏಣಿ ವಿದ್ಯುತ್‌ತಂತಿಗೆ ಸ್ಪರ್ಶಿಸಿದೆ ಎನ್ನಲಾಗಿದೆ. ಘಟನೆಯಿಂದ ದಾಸಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.


ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.