ಜಿಲ್ಲೆ

ವಿದ್ಯುತ್​ ತಗುಲಿ ರೈತ ಮೃತ

ಎನ್.ವೆಂಕಟೇಶ್

ಚಿಂತಾಮಣಿ: ತಾಲೂಕಿನ ಕಸಬಾ ಹೋಬಳಿ ಚೀಮನಹಳ್ಳಿಯಲ್ಲಿ ರೈತ ಕುರಿ&ಮೇಕೆಗಳಿಗೆ ಮೇವು ಕಟಾವು ಮಾಡುತ್ತಿದ್ದಾಗ ವಿದ್ಯುತ್​ ತಗುಲಿ ಮರದಿಂದ ಬಿದ್ದು ಶುಕ್ರವಾರ ಮೃತಪಟ್ಟಿದ್ದಾರೆ. ಲಕ್ಷ$್ಮಣ ರೆಡ್ಡಿ (65) ಮೃತ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಮೇಲೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಿದ್ದು, ಶನಿವಾರ ಅಂತ್ಯ ಸಂಸ್ಕಾರ ನಡೆಯಿತು.