ಮೂಡಿಗೆರೆ: ಜಾನುವಾರುಗಳನ್ನು ಮೇಯಿಸಲು ತೆರಳಿದ್ದ ವೇಳೆ ವಿದ್ಯುತ್ ತಂತಿ ಸ್ವರ್ಶಿಸಿ
ಬೈರಾಪುರ ಗ್ರಾಮದ ಕೃಷಿಕ ನಾಗೇಶ್‌ಗೌಡ (72) ಮೃತಪಟ್ಟಿದ್ದಾರೆ. ಗ್ರಾಮದ ಸರ್ಕಾರಿ
ಶಾಲೆಯ ಸಮೀಪ ಹಾದುಹೋಗಿರುವ 11ಕೆವಿ ಪವರ್‌ಲೈನ್ ಸಮೀಪ ಜಾನುವಾರುಗಳನ್ನು
ಮೇಯಲು ಬಿಟ್ಟು ವಿದ್ಯುತ್ ಕಂಬದ ಬಳಿ ನಿಂತಿದ್ದ ನಾಗೇಶ್‌ಗೌಡ ಅವರಿಗೆ ವಿದ್ಯುತ್ ಪ್ರವಹಿಸಿ
ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಸ್ಥಳಕ್ಕೆ ಮೆಸ್ಕಾಂ
ಅಧಿಕಾರಿಗಳು ಮತ್ತು ಗೋಣಿಬೀಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.