ಜಿಲ್ಲೆ

ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದ ರೈತ ಸಾವು

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಉಲಿಬೆಲೆ ಗ್ರಾಮದಲ್ಲಿ
ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದ ರೈತನೊಬ್ಬ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಯನ್ನು ಉಲಿಬೆಲೆ ಗ್ರಾಮದ ಈಶ್ವರಪ್ಪ ( 45).  ಎಂದಿನಂತೆ ಈಶ್ವರಪ್ಪ ತಮ್ಮ ತೋಟಕ್ಕೆ ಹೋದವರು ರಾತ್ರಿ ಮನೆಗೆ ವಾಪಸ್ ಬಂದಿಲ್ಲ.  ರಾತ್ರಿಯೇ ಕುಟುಂಬದವರು ತೋಟದ ಬಳಿ ಹುಡುಕಾಡಿದರೂ ಪತ್ತೆಯಾಗಿಲ್ಲ.‌ ಬೆಳಿಗ್ಗೆ ತೋಟದ ಬಳಿ ಇರುವ ಕೃಷಿಹೊಂಡದಲ್ಲಿ ಶವ ಕಂಡು ಬಂದಾಗ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ.‌ ಪೊಲೀಸರು  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

*ಕೆಳಕ್ಕೆ ಬಿದ್ದ ವ್ಯಕ್ತಿ ಸಾವು*
ಚಿಂತಾಮಣಿ ನಗರದ ಮೀನಿನ ಮಾರುಕಟ್ಟೆ ಬಳಿ ವ್ಯಕ್ತಿಯೊಬ್ಬರು ನಡೆದಾಡುವಾಗ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ.‌
ಮೃತಪಟ್ಟ ವ್ಯಕ್ತಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಜಕುಂಟ್ಲಹಳ್ಳಿ ಗ್ರಾಮದ ನಿವಾಸಿಯಾಗಿರುವ ಬೆಂಗಳೂರು ಪೋಸ್ಟ್ ಅಫೀಸ್ ನೌಕರ ತಿಪ್ಪಣ್ಣ(38). ಚಿಂತಾಮಣಿ ನಗರದ ಗಾಂಧಿನಗರ ಬಡಾವಣೆಯಲ್ಲಿ ವಾಸವಾಗಿದ್ದರು.
ಬೆಂಗಳೂರಿನಿಂದ ರಾತ್ರಿ ಬಂದಿದ್ದ ಆತ ಚಿಂತಾಮಣಿ ನಗರದ ಮೀನಿನ ಮಾರುಕಟ್ಟೆಯಲ್ಲಿ ಶವವಾಗಿ ಪತ್ತೆಯಾಗಿದ್ದು ಸಾವಿನ ಬಗ್ಗೆ ಅನುಮಾನ ಮೂಡಿದೆ.‌ ಚಿಂತಾಮಣಿ ನಗರಠಾಣೆಯ ಪೊಲೀಸರು ಸಮೀಪದ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು ಮೃತವ್ಯಕ್ತಿ ಸ್ಥಳಕ್ಕೆ ನಡೆದುಕೊಂಡು ಬಂದು  ಬಿದ್ದು ಹೋಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.