ಶಿರಸಿ: ಕೃಷಿ ಕಾರ್ಯಕ್ಕಾಗಿ ಗದ್ದೆಗೆ ಹೋದ ಸಂದರ್ಭದಲ್ಲಿ ಕೃಷಿಕನೋರ್ವ ಕಾಲು ಜಾರಿ ಕಾಲುವೆಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಸದಾಶಿವಳ್ಳಿ ಗ್ರಾಮ ಪಂಚಾಯಿತಿಯ ಗುಡ್ಡೆಕೊಪ್ಪದಲ್ಲಿ ಭಾನುವಾರ ನಡೆದಿದೆ.
ರೈತ ರಾಜೇಶ ಗಣಪತಿ ಗಣಪತಿ ನಾಯ್ಕ ಇಂದು ಮೃತಪಟ್ಟಿದ್ದಾನೆ.ಕಡು ಬಡ ಕುಟುಂಬದ ರೈತನಾಗಿದ್ದ ರಾಜೇಶ ನಾಯ್ಕ ಸಾವಿನಿಂದ ಆತನ ಕುಟುಂಬದವರು ನಿರ್ಗತಿಕರಾಗಿದ್ದು ಕೂಡಲೇ ಸರಕಾರದಿಂದ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.