ಅಳವಂಡಿ ರೈತ ಸಂಪರ್ಕ ಕೇಂದ್ರದಲ್ಲಿ ಏರ್ಪಡಿಸಿದ್ದ ಜಲಾನಯನ ಅಭಿವೃದ್ದಿ ಯೋಜನೆಯ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಉದ್ಘಾಟಿಸಿದರು. ಜಿಲ್ಲಾ ಉಪ ಕೃಷಿ ನಿರ್ದೆಶಕ ಸಹದೇವ ಯರಗುಪ್ಪ, ಎಒ ಪ್ರತಾಪಗೌಡ, ಗೊಬ್ಬರಗುಂಪಿ, ಎಎಒ ವೀರೇಶ, ಪ್ರಮುಖರಾದ ಗುರು, ರೇಣುಕಪ್ಪ, ಹನುಮಂತ, ತೋಟಯ್ಯ, ಮಂಜುನಾಥ, ಪರಶುರಾಮ ಇತರರಿದ್ದರು. 
ಜಿಲ್ಲೆ

ಮಳೆನೀರು ಕೊಯ್ಲು ಪದ್ಧತಿ ಅನುಸರಿಸಿ

ಅಳವಂಡಿ: ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡಾಗ ಕೃಷಿಯಲ್ಲಿ ಸುಸ್ಥಿರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ಸಹದೇವ ಯರಗುಪ್ಪ ತಿಳಿಸಿದರು.

ತೋಟಗಾರಿಕೆ ಮತ್ತು ಅರಣ್ಯ ಕೃಷಿ ಚಟುವಟಿಕೆಯಿಂದ ಆದಾಯ ಹೆಚ್ಚಿಸಿಕೊಳ್ಳಿ

ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಜಿಪಂ, ತಾಪಂ, ಕೃಷಿ ಇಲಾಖೆ, ಕೃಷಿ ಮತ್ತು ಜಲಾನಯನ ಅಭಿವೃದ್ದಿ ಯೋಜನೆ, ವಿಶ್ವ ಬ್ಯಾಂಕ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ದಿ ಯೋಜನೆ, ಸ್ವೋರ್ಡ-ಕೆ-ಸಾಶ್ವಿಹಳ್ಳಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಲಾನಯನ ಅಭಿವೃದ್ದಿ ಯೋಜನೆಯ ಗ್ರಾಮಸಭೆಯಲ್ಲಿ ಗುರುವಾರ ಮಾತನಾಡಿದರು.

ಇದನ್ನೂ ಓದಿ:

ಯೋಜನಾ ವ್ಯಾಪ್ತಿಯ ರೈತರಿಗೆ ಭೂ ಸಂಪನ್ಮೂಲಗಳ ಶಿಪಾರಸನ್ನು ಆಧರಿಸಿ ಸಲಹಾ ಸೇವೆಗಳನ್ನು ಒದಗಿಸಲಾಗುವದು. ಅಂತರ್ಜಲ ಮರುಪೂರಣ, ಮಣ್ಣಿನ ತೇವಾಂಶ ಲಭ್ಯತೆಗಾಗಿ ಮತ್ತು ರಕ್ಷಣಾತ್ಮಕ ನೀರಾವರಿಗಾಗಿ ಮಳೆ ಕೊಯ್ಲು ಮಾಡಬೇಕು. ತೋಟಗಾರಿಕೆ ಮತ್ತು ಅರಣ್ಯ ಕೃಷಿ ಚಟುವಟಿಕೆ ಮೂಲಕ ರೈತರ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ್ರ, ಬಿ.ಎಮ್.ಗೊಬ್ಬರಗುಂಪಿ, ವೀರೇಶ ಪಟ್ಟೇದ, ಸ್ವೋರ್ಡ-ಕೆ ಸಂಸ್ಥೆಯ ಕಾರ್ಯದರ್ಶಿ ಚನ್ನಬಸಪ್ಪ, ಪ್ರಮುಖರಾದ ಭಾರತಿ ಬೆಣಕಲ್, ಗುರುಬಸವರಾಜ ಹಳ್ಳಿಕೇರಿ, ಗ್ಯಾನಪ್ಪ ಹಳ್ಳಿಕೇರಿ, ತೋಟಯ್ಯ ಅರಳೆಲೆಮಠ, ದೇವಪ್ಪ ಕಟ್ಟಿಮನಿ, ರಮೇಶ, ರೇಣುಕಪ್ಪ ಹಳ್ಳಿಕೇರಿ, ಹನುಮಂತ ಮೂಲಿಮನಿ, ಮಂಜುನಾಥ ಬೆದವಟ್ಟಿ, ವಸಂತರಡ್ಡಿ, ಪರಶುರಾಮ, ಮಲ್ಲಪ್ಪ, ಹನುಮಂತ ಜೋಗಿನ, ಪಕೀರಸಾಬ, ಮಲ್ಲಮ್ಮ, ಸಿಬ್ಬಂದಿ ಗವಿಸಿದ್ದಪ್ಪ, ಮಂಜುನಾಥ, ವೆಂಕಟೇಶ, ಬಸನಗೌಡ, ಸುರೇಶ, ಸಂತೋಷ, ದಿಲೀಪಕುಮಾರ, ತಾರಾ, ಶಂಕರಪ್ಪ ಇತರರಿದ್ದರು.