ಜಿಲ್ಲೆ

ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಅಥಣಿ ಗ್ರಾಮೀಣ: ಸಾಲಬಾಧೆ ತಾಳಲಾರದೆ ಅಥಣಿ ತಾಲೂಕಿನ ರೈತ ಸವದಿ ಗ್ರಾಮದ ಮಹಾಂತೇಶ ಮಲಗೌಡ ಪಾಟೀಲ (45) ಬಾಳಿಕಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ಬುಧವಾರ ನಡೆದಿದೆ.

ತಾಲೂಕಿನ ಶಿರಹಟ್ಟಿ ಗ್ರಾಮದ ಕೆವಿಜಿ ಬ್ಯಾಂಕ್​ನಲ್ಲಿ 1 ಲ ರೂ., ಅಥಣಿ ಐಡಿಎ್​ಸಿ ಬ್ಯಾಂಕ್​ನಲ್ಲಿ 1 ಲ ರೂ. ಹಾಗೂ ಐಎನ್​ಟಿ ಫೈನಾನ್ಸ್​ನಲ್ಲಿ 1 ಲ ರೂ. ಸೇರಿ ಒಟ್ಟು 3 ಲ ರೂ. ಸಾಲ ಮಾಡಿದ್ದರು. ಹೈನುಗಾರಿಕೆಗೆ ಸಾಕಿದ್ದ ಎರಡು ಎಮ್ಮೆಗಳು ಈಚೆಗೆ ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ.