ಅರಕಲಗೂಡು: ತಾಲೂಕಿನ ಬೈಚನಹಳ್ಳಿ ಗ್ರಾಮದಲ್ಲಿ ಸಾಲಬಾಧೆಗೆ ನೊಂದು ರೈತ ಕೆರೆಗೆ ಬಿದ್ದು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ರಾಜೇಗೌಡ (62) ಮೃತ ರೈತ. ಗ್ರಾಮದ ಸೊಸೈಟಿಯಲ್ಲಿ 60 ಸಾವಿರ ರೂ. ಹಾಗೂ 3.50 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು. ಮಳೆಯಿಲ್ಲದೆ ಬೆಳೆ ಕೈಕೊಟ್ಟಿದ್ದರಿಂದ ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಕಾಳೇಗೌಡ ತಿಳಿಸಿದ್ದಾರೆ. ಅರಕಲಗೂಡು ಅಗ್ನಿ ಶಾಮಕ ಸಿಬ್ಬಂದಿ ಮೃತದೇಹ ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಶವ ಪರೀಕ್ಷೆಗೆ ಸಾಗಿಸಲಾಯಿತು.