ನವಲಗುಂದ: ಸಾಲಬಾಧೆ ತಾಳದೇ ರೈತ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಸೋಮಪ್ಪ ರಾಮಪ್ಪ ಜೋಗನಾಯಕರ (43) ಆತ್ಮಹತ್ಯೆ ಮಾಡಿಕೊಂಡವರು. ಅವರು ತಮ್ಮ ಜಮೀನಿನ ಮೇಲೆ ಕೆನರಾ ಬ್ಯಾಂಕ್ನಲ್ಲಿ 4 ಲಕ್ಷ ರೂ.ಗಳನ್ನು, ಸಹಕಾರಿ ಸಂಘದಲ್ಲಿ 1 ಲಕ್ಷ ರೂ., ಹಾಗೂ ವಿವಿಧ ಖಾಸಗಿ ಬ್ಯಾಂಕ್ನಲ್ಲೂ ಒಂದಿಷ್ಟು ಸಾಲ ಮಾಡಿದ್ದರು. ಸಾಲ ತೀರಿಸುವುದು ಹೇಗೆಂಬ ಚಿಂತೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.