ಜಿಲ್ಲೆ

ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಕೃಷ್ಣ ಕುಲಕರ್ಣಿ

ಜೇವರ್ಗಿ: ಅಂಕಲಗಾ ಗ್ರಾಮದಲ್ಲಿ ಶನಿವಾರ ಸಾಲಬಾಧೆಯಿಂದ ರೈತ ಬಾಬು ಹಣಮಂತ (32) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂರು ಎಕರೆ ಜಮೀನಿದ್ದು, ಅಂಕಲಗಾ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ 4.50 ಲಕ್ಷ ರೂ. ಮತ್ತು ಖಾಸಗಿಯಾಗಿ ಸಾಕಷ್ಟು ಸಾಲ ಮಾಡಿದ್ದ. ಬೆಳೆ ಸಮರ್ಪಕ ಬಾರದಿರುವುದರಿಂದ ಶನಿವಾರ ನಸುಕಿನ ಜಾವ ಬಾವಿಗೆ ಹಾರಿದ್ದಾನೆ.

ಪಿಎಸ್‌ಐ ಅಶೋಕ ಪಾಟೀಲ್, ಎಎಸ್‌ಐ ಸಚಿನ್, ಪೇದೆ ಗಂಗಣ್ಣ ಭೇಟಿ ನೀಡಿ ಪರಿಶೀಲಿಸಿದ್ದು, ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.