ಜಿಲ್ಲೆ

ಪ್ರಗತಿಪರ ಸಾವಯವ ಕೃಷಿಕ ಗುಂಡಿಕ್ಕಿಕೊಂಡು ಆತ್ಮಹತ್ಯೆ

Dakshina Kannada

ಕಾರ್ಕಳ: ದುರ್ಗಾ ಗ್ರಾಮದ ನೀಲಬೆಟ್ಟುಗುತ್ತು ನಿವಾಸಿ, ಪ್ರಗತಿಪರ ಸಾವಯವ ಕೃಷಿಕ ಭಾಸ್ಕರ್ ಹೆಗ್ಡೆ(63) ಬುಧವಾರ ಬೆಳಗ್ಗೆ ಮನೆಯಲ್ಲಿ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರ್ಕಳದ ಪರಿಸರದಲ್ಲಿ ಸಾವಯವ ಕೃಷಿಯಲ್ಲಿ ಮನೆಮಾತಾಗಿದ್ದರು, ದುರ್ಗಾ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.