ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸೆ. 28, 29 ರಂದು ಸ್ಥಾಪನೆಗೊಂಡಿದ್ದ ಗಣೇಶ ಮೂರ್ತಿಗಳನ್ನು ಮಂಗಳವಾರ ಶ್ರದ್ಧಾಭಕ್ತಿ, ಸಂಭ್ರಮದಿಂದ ವಿಸರ್ಜನೆ ಮಾಡಲಾಯಿತು.
ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸ್ಥಾಪಿಸಲಾಗಿದ್ದ ಕಾಳಿಂಗ ಸರ್ಪದ ಮೇಲೆ ನರ್ತಿಸುತ್ತಿರುವ ಆಕರ್ಷಣೀಯ ಗಣೇಶ ಮೂರ್ತಿ, ಚಳ್ಳಮರದ ಓಣಿಯ ಸನಾತನ ಹಿಂದು ಸಮಿತಿಯವರು ಸ್ಥಾಪಿಸಿದ್ದ ಲಕ್ಷ್ಮೇಶ್ವರದ ರಾಜಾ ಗಣೇಶನ ವಿಗ್ರಹಗಳನ್ನು ಮೆರವಣಿಗೆ ಮಾಡಲಾಯಿತು. ನೂರಾರು ಯುವಕರು ಹಾಡಿಗೆ ತಕ್ಕಂತೆ ಡಿಜೆ ಸೌಂಡ್‌ಗೆ ನೃತ್ಯ ಮಾಡಿ ಸಂಭ್ರಮಿಸಿದರು.
ಎಸ್‌ಪಿ ಬಿ.ಎಸ್. ನೇಮಗೌಡ, ಡಿವೈಎಸ್‌ಪಿ ಎಸ್.ಬಿ. ಸಂಕದ, ಸಿಪಿಐ ನಾಗರಾಜ ಮಾಡಳ್ಳಿ ಮತ್ತು ಇತರೆ ಸಿಬ್ಬಂದಿಯು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.