ಬನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತರಾದ ಪ್ರಾಂಶುಪಾಲ ಗೂಳೇಗೌಡರನ್ನು ಅಭಿನಂದಿಸಲಾಯಿತು. ಎಂ.ಅಶ್ವಿನ್‌ಕುಮಾರ್, ಡಾ.ಮಹೇಂದ್ರಸಿಂಗ್ ಕಾಳಪ್ಪ, ವೈ.ಎಸ್.ರಾಮಸ್ವಾಮಿ, ವೆಂಕಟೇಶ್, ಹನುಮಂತೇಗೌಡ, ಸಿ.ರಾಜು, ಎನ್.ಎಂ.ರಾಮಚಂದ್ರ ಇದ್ದರು. 
ಜಿಲ್ಲೆ

ನಿವೃತ್ತ ಪ್ರಾಂಶುಪಾಲರಿಗೆ ಬೀಳ್ಕೋಡುಗೆ

ಬನ್ನೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಮತ್ತು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ಗೂಳೇಗೌಡರನ್ನು ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘದ ಮುಖಂಡರು, ಹಳೇ ವಿದ್ಯಾರ್ಥಿ ಸಂಘದ ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಟ್ಟರು.

ಸಂತೆಮಾಳ ಪದವಿ ಪೂರ್ವ ಕಾಲೇಜಿನಿಂದ ತೆರದ ವಾಹನದಲ್ಲಿ ವಾದ್ಯಘೋಷದೊಂದಿಗೆ ಅವರನ್ನು ವೇದಿಕೆಗೆ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ವಿವಿಧ ಮುಖಂಡರು ಆಗಮಿಸಿ ಗೌರವಿಸಿದರು.

ನಂತರ ಮಾತನಾಡಿದ ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್, ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಗೂಳೇಗೌಡರಿಗೆ ಸಲ್ಲುತ್ತದೆ. ಉಪನ್ಯಾಸಕ, ಪ್ರಾಂಶುಪಾಲರಾಗಿ ಇವರ ಸೇವೆ ಅನನ್ಯ. ರಾಜ್ಯ ಮಟ್ಟದಲ್ಲಿ ಕಾಲೇಜು ಫಲಿತಾಂಶ ತಂದು ಕೊಡುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಎಂದರು.

ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ವೈ.ಎಸ್.ರಾಮಸ್ವಾಮಿ ಮಾತನಾಡಿದರು. ರೋಟರಿ ಅಧ್ಯಕ್ಷ ವೆಂಕಟೇಶ್, ಸಿ.ರಾಜು, ಎನ್.ಎಂ.ರಾಮಚಂದ್ರ, ಸತೀಶ್, ಅತ್ತಳ್ಳಿ ರವಿ, ಡಾ.ಜ್ಞಾನಪ್ರಕಾಶ್, ಸತೀಶ್‌ನಾಯಕ್, ಮೇಗಳ ಕೊಪ್ಪಲು ಜಯರಾಮು, ಸುಬ್ರಹ್ಮಣ್ಯ, ವಿನಾಯಕ ರೇಷ್ಮೆ ಬಿತ್ತಣೆ ಕೋಠಿಯ ಹನುಮಂತೇಗೌಡ ಹಲವರು ಇದ್ದರು.