ಜಿಲ್ಲೆ

ಸಾಧನೆಗೆ ದೃಢ ಸಂಕಲ್ಪ ಅವಶ್ಯಕ

ಹೊನ್ನಾಳಿ: ಸತತ ಪರಿಶ್ರಮದಿಂದ ಮಾತ್ರ ಶಾಲೆ ಶೇ.100 ರಷ್ಟು ಫಲಿತಾಂಶ ಪಡೆಯಲು ಸಾಧ್ಯ. ಉನ್ನತ ಶ್ರೇಣಿಯಲ್ಲಿ ಉತೀರ್ಣರಾಗಲು ನಿರಂತರ ಅಧ್ಯಯನ ಮಾಡಬೇಕು ಎಂದು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಶಿವಕುಮಾರ್ ಹೇಳಿದರು.

ತಾಲೂಕಿನ ಸಿಂಗಟಗೆರೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಷ್ಟೇ ಕಠಿಣ ಪ್ರಶ್ನೆಗಳಿದ್ದರೂ ಏಕಾಗ್ರತೆ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಆತುರದಲ್ಲಿ ಉತ್ತರ ಬರೆಯದೆ ಮೊದಲು ಪ್ರಶ್ನೆ ಅರ್ಥ ಮಾಡಿಕೊಳ್ಳಬೇಕು. ಆಗ ಸ್ಪಷ್ಟ ಉತ್ತರ ಬರೆಯಲು ಹಾಗೂ ಹೆಚ್ಚು ಅಂಕ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಸಾಧನೆ ಮಾಡುತ್ತೇನೆಂದು ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಬೇಕು. ಏಕಾಗ್ರತೆಗಾಗಿ ನಿತ್ಯ ಹತ್ತು ನಿಮಿಷ ಪ್ರಾಣಾಯಮ ಮಾಡಿ, ನಂತರ ಅಧ್ಯಯನ ಪ್ರಾರಂಭಿಸಬೇಕು. ಗುಂಪು ಅಧ್ಯಯನ ಮಾಡಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು.

ಶಾಲೆಯು ಪ್ರತಿವರ್ಷ ಶೇ.100 ರಷ್ಟು ಫಲಿತಾಂಶ ಪಡೆಯಲು ಶಿಕ್ಷಕರು ಹಾಗೂ ಸಿಬ್ಬಂದಿ ಶ್ರಮಪಡುತ್ತಿದ್ದಾರೆ ಹಾಗೂ ವಿಜಯವಾಣಿಯ ವಿದ್ಯಾರ್ಥಿಮಿತ್ರ ಸಹ ವಿದ್ಯಾರ್ಥಿಗಳು ಶೇಕಡವಾರು ಹೆಚ್ಚು ಅಂಕ ಗಳಿಸಲು ಸಹಾಯಕವಾಗಿದೆ. ಇದು ಹೆಮ್ಮೆಯ ವಿಚಾರ ಎಂದರು.

ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್​ಗೌಡ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕಗಳಿಸುವ ಜತೆಗೆ ಸಂಸ್ಕಾರವಂತರಾಗಿ ಸನ್ಮಾರ್ಗದಲ್ಲಿ ಮುನ್ನಡೆದು ಸಮಾಜಮುಖಿಯಾಗಿ ಸೇವೆ ಸಲ್ಲಿಸಬೇಕು. ಆಗ ಸಮಾಜ ಗುರುತಿಸಿ ಗೌರವಿಸುತ್ತದೆ ಎಂದು ಹೇಳಿದರು.

ಎಸ್​ಎಸ್​ಎಲ್​ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಪ್ರಥಮ 5000 ರೂ., ದ್ವಿತೀಯ 3000 ರೂ. ಹಾಗೂ ತೃತೀಯ 2000ರೂ. ಬಹುಮಾನ ನೀಡಿದ ಗ್ರಾ.ಪಂ. ಸದಸ್ಯ ಜಯಣ್ಣ ಮಾತನಾಡಿ, ಪಾಲಕರು ಕೂಲಿನಾಲಿ ಮಾಡಿ ಮಕ್ಕಳ ಓದಿಗೆ ಅವಿರತ ಶ್ರಮಿಸುತ್ತಾರೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ತಮ್ಮ ಪಾಲಕರನ್ನು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಾಯಿ ಗುರುಕುಲ ಸಂಸ್ಥೆಯ ಕಾರ್ಯದರ್ಶಿ ಸೌಮ್ಯಾ ಪ್ರದೀಪ್, ತಿಮ್ಲಾಪುರ ಗ್ರಾ.ಪಂ. ಅಧ್ಯಕ್ಷ ಹನುಮಂತಪ್ಪ ಮಾತನಾಡಿದರು.

ಮುಖಂಡ ಅಣ್ಣಪ್ಪ , ಶಿಕ್ಷಕರಾದ ನಸರುಲ್ಲಾ, ಹಾಲೇಶ್​ನಾಯ್್ಕ ಪ್ರದೀಪ್​ಕುಮಾರ್, ರಾಜೇಶ್ ತಳವಾರ, ಭೀಮಾನಾಯ್್ಕಪ್ರದೀಪ್​ಕುಮಾರ್, ಬಷೀರಾ ಬಳೆಗಾರ, ಉರುಬ ಖುತೇಜ ಖಾನಂ ಹಾಗೂ ಸಿಬ್ಬಂದಿ ಚೈತ್ರಾಬಾಯಿ, ಶಬೀನಾ ಇದ್ದರು.