ಜಿಲ್ಲೆ

ಚೆನ್ನಾಗಿ ಕಲಿತು ಶಾಲೆಯ ಕೀರ್ತಿ ಹೆಚ್ಚಿಸಿ...

ನಗರಸಭಾ ಸದಸ್ಯೆ ಮಾನಸಾ ಪೈ ಕರೆ

ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯಲ್ಲಿರುವ ಸರ್ಕಾರಿ ನಾರ್ತ್​ ಹಿರಿಯ ಪ್ರಾಥಮಿಕ ಶಾಲೆಯು ಶತಮಾನ ಕಂಡಿದ್ದು, ಅಪಾರ ಸಂಖ್ಯೆಯ ಜನರ ಬದುಕು ನಿರ್ಮಿಸಿದೆ. ತಾವುಗಳೂ ಸಹ ಚೆನ್ನಾಗಿ ಓದುವ ಮೂಲಕ ಉನ್ನತ ಸ್ಥಾನ ಅಲಂಕರಿಸಿ ಕಲಿತ ಶಾಲೆಯ ಕೀರ್ತಿ ಹೆಚ್ಚಿಸಬೇಕು ಎಂದು ತೆಂಕುಪೇಟೆ ವಾರ್ಡ್​ ಸದಸ್ಯೆ ಮಾನಸಾ ಸಿ. ಪೈ ಕರೆ ನೀಡಿದರು.

ಉಡುಪಿಯ ಸರ್ಕಾರಿ ನಾರ್ತ್​ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 7ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಮೇ ತಿಂಗಳಲ್ಲಿ ನಿವೃತ್ತರಾಗಲಿರುವ ಮುಖ್ಯೋಪಾಧ್ಯಾಯಿನಿ ವಸಂತಿ ಅವರನ್ನು ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ ಎಂ. ರಾವ್​, ಶಾಲಾಭಿವೃದ್ಧಿ ಸಮಿತಿಯ ಅಧ್ಯೆ ಅನುಶ್ರೀ ಬಸಪ್ಪ, ಮಾಜಿ ಅಧ್ಯಕ್ಷೆ ಸುನೀತಾ, ವಾಸುದೇವ ಕೃಪಾ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಯು. ಕಲ್ಯಾಣಿ ಪೈ, ಸಂಘದ ಕಾರ್ಯದರ್ಶಿ ಶ್ರೀದೇವಿ, ಹಳೆಯ ವಿದ್ಯಾರ್ಥಿಗಳಾದ ಹರೀಶ ಬೈಲಕೆರೆ, ಮಹೇಶ ಹಾಗೂ ಇತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಶಾಲೆಯ ಶಿಕ್ಷಕಿಯರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಕಿಯರಾದ ಜ್ಯೋತಿ ಮತ್ತು ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು. ಸಾವಿತ್ರಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.