ಜಿಲ್ಲೆ

ಮಧೂರು ದೇಗುಲ ಸಿಬ್ಬಂದಿಗೆ ಬೀಳ್ಕೊಡುಗೆ

ಕಾಸರಗೋಡು: ಶ್ರೀ ಮಧೂರು ದೇಗುಲದಲ್ಲಿ ಕಳೆದ 3 ದಶಕಗಳಿಂದ ದೇವರ ಪ್ರಸಾದ ವಿತರಣೆ, ಇನ್ನಿತರ ಕೆಲಸ ಕಾರ್ಯ ನಡೆಸಿ ಸೇವೆಯಿಂದ ನಿವೃತ್ತರಾದ ಮುಟ್ಟತೋಡಿಯ ಪರಮೇಶ್ವರ ಅಡಿಗ ಅವರಿಗೆ ಇಂದು ದೇಗುಲದ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.

ದೇಗುಲದ ಎಕ್ಸಿಕ್ಯೂಟಿವ್ ಆಫೀಸರ್ ಟಿ.ರಾಜೇಶ್ ಅವರು ಪರಮೇಶ್ವರ ದಂಪತಿಯನ್ನು ಗೌರವಿಸಿದರು. ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಅವರ ಪತ್ನಿ ಉಡುಗೊರೆ ನೀಡಿ ಹರಸಿದರು. ದೇಗುಲದ ಹಿರಿಯ ಅಧಿಕಾರಿ ಬಿ.ಎನ್.ಸುಬ್ರಹ್ಮಣ್ಯ ಪರಿಚಯ ಭಾಷಣ ಮಾಡಿದರು. ದೇವಸ್ಥಾನದ ಪಿ.ಕೆ.ಧನಂಜಯ ಕೃಷ್ಣಮೂರ್ತಿ ಕಲ್ಲೂರಾಯ, ಕೃಷ್ಣಪ್ರಸಾದ್ ಅಡಿಗ ಮೊದಲಾದವರು ಉಪಸ್ಥಿತರಿದ್ದರು.