ಕೆ.ಆರ್.ನಗರದ ಪ್ರಧಾನ ಸಿವಿಲ್ ನ್ಯಾಯಾಲಯದಿಂದ ಲೋಕಾಯುಕ್ತ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ನ್ಯಾಯಾಧೀಶೆ ಪವಿತ್ರಾ ಅವರನ್ನು ಅಭಿನಂದಿಸಲಾಯಿತು. ಅರವಿಂದ್, ಜಿ.ಎಲ್.ಧರ್ಮ ಮತ್ತಿತರರು ಇತರರಿದ್ದರು. 
ಜಿಲ್ಲೆ

ನ್ಯಾಯಾಧೀಶೆ ಪವಿತ್ರಾಗೆ ಬೀಳ್ಕೊಡುಗೆ

ಶಿವಶಂಕರ್ ಎಂ. ಹೆಬ್ಬಳ್ಳ

ಕೆ.ಆರ್.ನಗರ : ಅತ್ಯಂತ ಚಿಕ್ಕವಯಸ್ಸಿನ ನ್ಯಾಯಾಧೀಶರಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುವುದರ ಜತೆಗೆ ವಕೀಲರ ವಿಶ್ವಾಸ ಗಳಿಸಿದ ಪವಿತ್ರಾ ಅವರು ಭವಿಷ್ಯದಲ್ಕಿ ಉತ್ತಮ ಮತ್ತು ಉನ್ನತ ಸ್ಥಾನಕ್ಕೇರಲಿ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಅರವಿಂದ ಹಾರೈಸಿದರು.
ಪಟ್ಟಣದ ವಕೀಲರ ಸಭಾಂಗಣದಲ್ಲಿ ಲೋಕಾಯುಕ್ತ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ನ್ಯಾಯಾಧೀಶೆ ಪವಿತ್ರಾ ಮತ್ತು ಅವರ ಪತಿ ವಕೀಲ ಕಿರಣ್ ಅವರಿಗೆ ವಕೀಲರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪವಿತ್ರಾ ಅವರು ಅತ್ಯಂತ ಅನುಭವಿಯಾಗಿದ್ದು ಇತರ ನ್ಯಾಯಾಧೀಶರಿಗೆ ಸಹಕಾರ ಹಾಗೂ ವಕೀಲರಿಗೂ ಸಲಹೆ ನೀಡುತ್ತಿದ್ದರು ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶೆ ಪವಿತ್ರಾ ಅವರು, ಹಿರಿಯ ವಕೀಲರು ಇರುವ ಈ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿರುವುದು ನನಗೆ ಹೆಮ್ಮೆ ತಂದಿದೆ. ಪ್ರೀತಿ ವಿಶ್ವಾಸದಿಂದ ಗೌರವಿಸುತ್ತಿರುವ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ. ವಕೀಲರ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿ ಎಂದು ತಿಳಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ದಿಲೀಪ್ ಮಾತನಾಡಿ, ನ್ಯಾಯಾಧೀಶರಾದ ಪವಿತ್ರಾ ಅವರು, ತಾಲೂಕಿನ 34 ಗ್ರಾಮ ಪಂಚಾಯಿತಿಯ 135 ಗ್ರಾಮಗಳಲ್ಲಿ ಕಾನೂನು ಅರಿವು ಕಾರ್ಯಕ್ರಮದ ಮೂಲಕ ಜನರಿಗೆ ಅರಿವು ಮೂಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಎಲ್.ಧರ್ಮ, ಹಿರಿಯ ವಕೀಲರಾದ ಕೃಷ್ಣೇಅರಸ್, ಜಿ.ಆರ್.ರಾಮೇಗೌಡ, ಬೀಚನಹಳ್ಳಿ ಮಹದೇವಸ್ವಾಮಿ, ಸಿ.ಡಿ.ಮಹದೇವಪ್ಪ, ವಕೀಲರಾದ ರುದ್ರಮೂರ್ತಿ, ಡಿ.ಸಿ.ಗೋವಿಂದರಾಜು, ಬಿ.ಎಸ್.ಶಿವಶಂಕರ್, ನೇತ್ರಾವತಿ, ಶರತ್ ಅರಸ್, ವೇದಾವತಿ, ಮಧುನಹಳ್ಳಿ ಶಿವರಾಜ್, ತಿಮ್ಮಪ್ಪ, ಧನಲಕ್ಷ್ಮೀ, ಕಾರ್ತಿಕ್, ರಮೇಶ್, ಕೊಡಿಯಾಲ ಮಹೇಶ್ ಮತ್ತಿತರರು ಇದ್ದರು.