ಜಿಲ್ಲೆ

ನ್ಯಾಯಾಧೀಶ ಅಪ್ಪಾಸಾಬ್ ಬೀಳ್ಕೊಡುಗೆ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ಪಟ್ಟಣದ ಕಿರಿಯ ದಿವಾಣಿ ನ್ಯಾಯಾಧೀಶರಾಗಿ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಅಪ್ಪಾಸಾಬ್ ನಾಯಿಕ್ ಅವರು ಪದೋನ್ನತಿ ಪಡೆದು ವರ್ಗಾವಣೆಗೊಂಡಿದ್ದು, ಸಂಘದ ವತಿಯಿಂದ ಸೋಮವಾರ ನ್ಯಾಯಾಲಯ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ದಿವಾಣಿ ನ್ಯಾಯಾಧೀಶರಾದ ಸರ್ವಮಂಗಳಾ ಕೆ.ಎಂ. ಮಾತನಾಡಿ, ಅಪ್ಪಾಸಾಬ್ ನಾಯಿಕ್ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಾಮಾನ್ಯರ ಬಗ್ಗೆ ಅರಿವು, ಮಾನವೀಯತೆ, ಅನುಕಂಪದ ಗುಣಗಳು ಅವರಲ್ಲಿದ್ದವು. ಹುದ್ದೆಯ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದಾರೆ ಎಂದರು.

ಅಪ್ಪಾಸಾಬ್ ನಾಯಿಕ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲರಾದ ವಿ.ಎಲ್. ಪೂಜಾರ, ಎ.ಬಿ. ಪಾಟೀಲ, ಆರ್.ಸಿ. ಪಾಟೀಲ. ಬಿ.ಎಸ್. ಘೋಂಗಡಿ, ಬಿ.ಎಸ್. ಪಾಟೀಲ, ವಿ.ಆರ್.ಪಾಟೀಲ, ಜೆ.ಡಿ. ದೊಡ್ಡಮನಿ, ಎಂ.ಎಂ. ಬಮ್ಮನಕಟ್ಟಿ, ಪಿ.ಎಂ. ನಾವಿ, ಸುರೇಶ ನಾವಿ, ಬಿ.ಬಿ. ಭುವನಗೌಡ್ರ, ಬಿ.ವಿ. ನೇಕಾರ, ಪಿ.ಎಂ. ವಾಲಿ ಇದ್ದರು. ಪದಾಧಿಕಾರಿಗಳಾದ ವಿಠಲ್ ನಾಯಕ್, ಎ.ಟಿ. ಕಟ್ಟಿಮನಿ, ಮಹೇಶ ಹಾರೋಗೇರಿ, ಎನ್.ಐ. ಬೆಲ್ಲದ ಉಪಸ್ಥಿತರಿದ್ದರು.