ಜಿಲ್ಲೆ

ರೆಡ್ ಕ್ರಾಸ್‌ನಿಂದ ಡಾ.ಬಿ.ಸಿ.ಸತೀಶ್‌ಗೆ ಬೀಳ್ಕೊಡುಗೆ

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಇದೀಗ ವರ್ಗಾವಣೆಯಾಗಿರುವ ಡಾ.ಬಿ.ಸಿ.ಸತೀಶ್‌ರವರಿಗೆ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಘಟಕದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.


ಈ ಸಂದರ್ಭ ಮಾತನಾಡಿದ ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ, ಮಡಿಕೇರಿಯಲ್ಲಿ ಸುಸಜ್ಜಿತವಾದ ರೆಡ್ ಕ್ರಾಸ್ ಭವನ ನಿರ್ಮಾಣವಾಗುವಲ್ಲಿ ಜಿಲ್ಲಾಧಿಕಾರಿಯಾಗಿದ್ದ ಬಿ.ಸಿ.ಸತೀಶ್‌ರವರ ಕೊಡುಗೆ ಮಹತ್ವದ್ದಾಗಿತ್ತು. ಕಳೆದ ವರ್ಷ ಮಳೆಗಾಲದಲ್ಲಿ ಕಾಳಜಿ ಕೇಂದ್ರವನ್ನು ರೆಡ್ ಕ್ರಾಸ್ ಸಭಾಭವನದಲ್ಲಿ ಪ್ರಾರಂಭಿಸಿ, ಅನೇಕ ಸಂಸ್ತಸ್ಥರಿಗೆ ನೆರವು ನೀಡುವಲ್ಲಿಯೂ ಸತೀಶ್‌ರವರು ಕಾಳಜಿ ತೋರಿದ್ದರು ಎಂದು ಹೆಮ್ಮೆಯಿಂದ ಸ್ಮರಿಸಿದರು.


ಡಾ.ಬಿ.ಸಿ.ಸತೀಶ್‌ರವರ ಕೊಡುಗೆ ಜಿಲ್ಲೆಯ ಜನತೆಯ ಮನದಲ್ಲಿ ಸದಾ ಉಳಿಯುವಂಥದ್ದು ಎಂದು ರವೀಂದ್ರ ರೈ ಹೇಳಿದರು.


ಈ ಸಂದರ್ಭ ರೆಡ್ ಕ್ರಾಸ್ ಕೊಡಗು ಘಟಕದ ಉಪಾಧ್ಯಕ್ಷ ಎಚ್.ಟಿ.ಅನಿಲ್, ಪ್ರಧಾನ ಕಾರ್ಯದರ್ಶಿ ಮುರಳೀಧರ್ ಹಾಜರಿದ್ದರು.