ಜಿಲ್ಲೆ

ಕಾಪ್ಸ್‌ನಿಂದ ಕ್ಯಾ.ಬಿ.ಎಂ.ಗಣೇಶ್‌ಗೆ ಬೀಳ್ಕೊಡುಗೆ

ಗೋಣಿಕೊಪ್ಪ: ಕೂರ್ಗ್ ಪಬ್ಲಿಕ್ ಶಾಲೆ (ಕಾಪ್ಸ್) ಮತ್ತು ಕೂರ್ಗ್ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಬಿ.ಎಂ.ಗಣೇಶ್ ಅವರಿಗೆ ಕಾಪ್ಸ್ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.


ಕಾಪ್ಸ್‌ನ ಸಭಾಂಗಣ ಕಲಾಮಂಚ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ 29ನೇ ಪದವಿ ಪ್ರದಾನ ಸಮಾರಂಭದಲ್ಲಿ ಕ್ಯಾ.ಬಿ.ಎಂ.ಗಣೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.


ಕಾಪ್ಸ್‌ನ ಸ್ಥಾಪಕ ಅಧ್ಯಾಪಕರಲ್ಲಿ ಒಬ್ಬರಾಗಿರುವ ಗಣೇಶ್ ಅವರು ಕಳೆದ 28 ವರ್ಷಗಳಿಂದ ಕಾರ್ಯನಿರ್ವಹಿಸಿದರಲ್ಲದೆ, 20 ವರ್ಷಗಳ ಕಾಲ ಕಾಪ್ಸ್‌ನ ಎನ್‌ಸಿಸಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಎನ್.ಸಿ.ಸಿ. ಅಧಿಕಾರಿಯಾಗಿ ಕ್ಯಾಪ್ಟನ್ ಪದವಿ ಪಡೆದಿದ್ದರು.


ಕಾಪ್ಸ್‌ನ ಪ್ರಾಶುಪಾಲ ಡಾ.ಎಂ.ರಾಮಚಂದ್ರ ಮಾತನಾಡಿ, 28 ವರ್ಷಗಳ ಕಾಲ ಈ ವಿದ್ಯಾಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಗಣೇಶ್ ಅವರ ವೃತ್ತಿಬದ್ಧತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡಿರುವ ಗಣೇಶ್ ಅವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿದ್ದ ನಿವೃತ ಲೆಫ್ಟಿನೆಂಟ್ ಜನರಲ್ ಪಿ.ಸಿ. ತಿಮ್ಮಯ್ಯ, ಕೊಡಗು ಅಕಾಡೆಮಿ ಫಾರ್ ಎಜುಕೇಷನ್ ಆ್ಯಂಡ್ ಕಲ್ಚರ್ (ಕಾಪ್ಸ್ ಆಡಳಿತ ಮಂಡಳಿ) ಅಧ್ಯಕ್ಷೆ ಕೀಕಿರ ಧನ್ಯಾ ಸುಬ್ಬಯ್ಯ, ಆಡಳಿತ ಮಂಡಳಿ ಪದಾಧಿಕಾರಿಗಳಾದ ಎಂ.ಎಂ.ತಿಮ್ಮಯ್ಯ, ಪ್ರಭಾ ಸುಬ್ಬಯ್ಯ, ಎಂ.ಟಿ.ಮಾಚಯ್ಯ, ಉಪ ಪ್ರಾಂಶುಪಾಲರಾದ ವೇದಾ ಬೋಪಣ್ಣ, ಕಾಪ್ಸ್ ನ ಎನ್.ಸಿ.ಸಿ.ಅಧಿಕಾರಿ ಲೆ.ಕಿಶೋರ್‌ಕುಮಾರ್ ಸೇರಿದಂತೆ ವಿದ್ಯಾಸಂಸ್ಥೆಯ ಬೋಧಕ- ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.