ಕೋಟ: ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಸವಾಜಶಾಸ್ತ್ರ ಉಪನ್ಯಾಸಕರಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿಯಾದ ಅಶೋಕ್‌ಕುವಾರ್ ಶೆಟ್ಟಿ ಅವರನ್ನು ಕೋಟ ವಿದ್ಯಾಸಂ ಮತ್ತು ವಿವೇಕ ವಿದ್ಯಾಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಕೋಟ ವಿದ್ಯಾಸಂದ ಅಧ್ಯಕ್ಷ ಸಿಎ ಪಿ.ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ರಾಮದೇವ ಐತಾಳ್, ಉಪನ್ಯಾಸಕ ಸಂಜೀವ ಜಿ., ಮುಖ್ಯಶಿಕ್ಷಕ ವೆಂಕಟೇಶ ಉಡುಪ ಅನಿಸಿಕೆ ವ್ಯಕ್ತಪಡಿಸಿದರು.
ಆಂಗ್ಲ ವಾಧ್ಯಮ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಪ್ರೀತಿ ರೇಖಾ, ಆಡಳಿತ ಮಂಡಳಿಯ ಪದಾಧಿಕಾರಿಗಳು, ವಿದ್ಯಾ ಸಂಸ್ಥೆಗಳ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಜಗದೀಶ ನಾವಡ ಸ್ವಾಗತಿಸಿದರು. ಮುಖ್ಯ ಸಹಶಿಕ್ಷಕ ಪ್ರೇವಾನಂದ ವಂದಿಸಿದರು. ಶಿಕ್ಷಕಿ ರತಿ ಬಾಯಿ ನಿರೂಪಿಸಿದರು.