ಶೇಡಿಮನೆ ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಶ್ರೀನಿವಾಸ ಉಪ್ಪೂರ್ ಹಾಗೂ ಶಿಕ್ಷಕಿ ವಿನುತಾ ಅವರನ್ನು ಸನ್ಮಾನಿಸಲಾಯಿತು 
ಜಿಲ್ಲೆ

ಶಾಲೆ ಬೆಳವಣಿಗೆಯಲ್ಲಿ ಶಿಕ್ಷಕರ ಅಮೂಲ್ಯ ಪಾತ್ರ

ಇಂದಿರಾ ಎನ್ ಕೆ

ಆರ್ಡಿ: ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸೇವೆ ಸಲ್ಲಿಸಿದಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಶಾಲೆ ಬೆಳವಣಿಗೆಗೆ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು ಎಂದು ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ ಹೇಳಿದರು.

ಶೇಡಿಮನೆ ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ವರ್ಷ ಸೇವೆ ಸಲ್ಲಿಸಿ ಬ್ರಹ್ಮಾವರ ಯಡ್ತಾಡಿ ಶಾಲೆಗೆ ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಶ್ರೀನಿವಾಸ ಉಪ್ಪೂರ್ ಹಾಗೂ 14 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಉಡುಪಿ ಹೆಜಮಾಡಿ ಕೋಡಿ ಪ್ರೌಢ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ವಿನುತಾಗೆ ಇತ್ತೀಚೆಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳ ಮೊಕ್ತೇಸರ ಚಂದ್ರಶೇಖರ್ ಶೆಟ್ಟಿ ಮೂಡುಬೈಲ್, ಹಾಲಾಡಿ ವೃತ್ತ ಶಿಕ್ಷಣ ಸಂಯೋಜಕ ಶೇಖರ್ ಯು., ಸಿಆರ್‌ಪಿ ಅನೂಪ್‌ಕುಮಾರ್ ಶೆಟ್ಟಿ, ಮಡಾಮಕ್ಕಿ ಗ್ರಾಪಂ ಸದಸ್ಯ ಸದಾನಂದ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ವಸಂತ ಪೂಜಾರಿ, ಆರ್ಥಿಕ ಸಮಿತಿ ಅಧ್ಯಕ್ಷ ವಾಸುದೇವ ನಕ್ಷತ್ರಿ, ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದದವರು, ಪಾಲಕರು ಉಪಸ್ಥಿತರಿದ್ದರು.

ಶಿಕ್ಷಕ ಶ್ರೀಕಾಂತ ಆಚಾರ್ಯ ಸ್ವಾಗತಿಸಿದರು. ಸುಧಾಕರ ಶೆಟ್ಟಿ ಅರಸಮ್ಮಕಾನು ಪ್ರಾಸ್ತಾವಿಕ ಮಾತನಾಡಿದರು. ಸಹ ಶಿಕ್ಷಕಿ ಜಯಶ್ರೀ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಉಷಾಲತಾ ವಂದಿಸಿದರು.