ಬೀಳ್ಕೊಡುಗೆ ಸಮಾರಂಭ 
ಜಿಲ್ಲೆ

ಜಗತ್ತು ಬದಲಾಯಿಸುವ ಅಸ ಶಿಕ್ಷಣ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ವಿಜಯಪುರ
ಶಿಕ್ಷಣವು ಜಗತ್ತನ್ನು ಬದಲಾಯಿಸುವ ಪ್ರಮುಖ ಅಸ್ತ್ರವಾಗಿದ್ದು, ಶಿಕ್ಷಣ ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಕ್ತಿಯನ್ನು ಜ್ಞಾನವುಳ್ಳ ನಾಗರಿಕನನ್ನಾಗಿ, ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜು ಅವಳೇಕಾರ್ ತಿಳಿಸಿದರು.
ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಪ್ರಗತಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಶ್ರೀ ನಗರೇಶ್ವರ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಂ.ಸತೀಶ್ ಕುಮಾರ್ ಮಾತನಾಡಿ, ಉನ್ನತ ವ್ಯಾಸಂಗ ಮಾಡುತ್ತಿರುವ ಎಲ್ಲರಿಗೂ ವ್ಯಕ್ತಿತ್ವ ವಿಕಸನವೆಂಬುದು ಸಾಮಾನ್ಯವಾಗಿದ್ದು, ಅದು ಶಾಲೆಯಲ್ಲಿ ಸಿಗುವ ಅಂಕಗಳಿಗಿಂತ ಮಿಗಿಲಾಗಿ, ಆ ವಿದ್ಯಾರ್ಥಿಯ ದೃಷ್ಟಿಕೋನ ನಡವಳಿಕೆ ಮೇಲೆ ಗುರುತಿಸಲ್ಪಡುತ್ತದೆ. ವ್ಯಕ್ತಿತ್ವ ವಿಕಸನ ಕೇವಲ ಒಂದು ವಿಷಯವಲ್ಲ. ಅನೇಕ ವಿಷಯಗಳ ಸಮೂಹವಾಗಿದೆ ಎಂದರು.