ಜಿಲ್ಲೆ

ವಿದ್ಯಾರ್ಥಿಗಳಿಗೆ ನಿವೃತ್ತ ಶಿಕ್ಷಕರ ಪ್ರೋತ್ಸಾಹ ಅನನ್ಯ : ಫಾತಿಮತ್ ರಫೀದಾ ಅಭಿಪ್ರಾಯ

ಸೌಮ್ಯ ಆರ್

ಉಳ್ಳಾಲ: ವಿದ್ಯಾರ್ಥಿಗಳು ವೇದಿಕೆಯಲ್ಲಿ ನಿಂತು ಮಾತನಾಡಲು, ಭಾಷಾ ಉಚ್ಛಾರ ಸರಿಪಡಿಸಲು ನಿವೃತ್ತ ಶಿಕ್ಷಕಿಯರ ಪರಿಶ್ರಮ, ನಿರಂತರ ಪ್ರೋತ್ಸಾಹ ಕಾರಣ ಎಂದು ಉಳ್ಳಾಲ ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಫಾತಿಮತ್ ರಫೀದಾ ಅಭಿಪ್ರಾಯಪಟ್ಟರು.

ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ವತಿಯಿಂದ ಹರೇಕಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಶಿಕ್ಷಕರಿಗೆ ನಡೆದ ವಿದಾಯ ಸಮಾರಂಭದಲ್ಲಿ ಮಾತನಾಡಿದರು.

ಜಿಲ್ಲಾಮಟ್ಟ ಹಾಗೂ ಇತರ ಪ್ರತಿಭಾ ಕಾರಂಜಿಗಳಲ್ಲಿ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆಯದಿದ್ದರೂ ಶಿಕ್ಷಕಿಯರು ನೀಡಿದ ಪ್ರೋತ್ಸಾಹ ಮರೆಯಲಾಗದ್ದು ಎಂದರು.

ನಿವೃತ್ತ ಶಿಕ್ಷಕಿಯರಾದ ಸುಮಲತಾ ಎ.ಮತ್ತು ಲಕ್ಷ್ಮೀ ಶ್ರೀನಿವಾಸ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ತ್ರಿಶಕ್ತಿ ವಿದ್ಯಾವರ್ಧಕ ಸಂಘ ಅಧ್ಯಕ್ಷ ಕೆ.ಎನ್.ಆಳ್ವ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಜಂಟಿ ಶಾಲೆಗಳ ಸಂಚಾಲಕ ಕಡೆಂಜ ಸೋಮಶೇಖರ್ ಚೌಟ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕರಾದ ರವೀಂದ್ರ ರೈ ಕಲ್ಲಿಮಾರ್, ನತಾಲಿಯನ್ ಎಡ್ವರ್ಡ್ ಐಮನ್, ಆಡಳಿತ ಮಂಡಳಿ ಕಾರ್ಯದರ್ಶಿ ರಾಜ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಜಯರಾಮ ಆಳ್ವ ಪೋಡಾರ್ ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ರೈ ಸ್ವಾಗತಿಸಿ. ಶಿಕ್ಷಕಿಯರಾದ ಪ್ರೇಮಲತಾ ಮತ್ತು ಲಕ್ಷ್ಮೀ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ನಾಗೇಂದ್ರ ವಂದಿಸಿದರು, ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ನಿರೂಪಿಸಿದರು.

ಶಿಕ್ಷಕಿಯರಿಗೆ ಶಾಲೆಯೇ ದೇವಸ್ಥಾನ, ಶಾಲೆಯೇ ಸರ್ವಸ್ವ ಆಗಿರುತ್ತದೆ. ವೃತ್ತಿಯಿಂದ ನಿವೃತ್ತರಾದ ಬಳಿಕ ಮನೆಗೇ ಸೀಮಿತರಾದರೆ ಆರೋಗ್ಯ ಹದಗೆಡುತ್ತದೆ, ಪ್ರತಿದಿನ ಯಾವುದೇ ಸಮಯದಲ್ಲೂ ಶಾಲೆಗೆ ಬಂದು ಕನಿಷ್ಟ ಒಂದು ಗಂಟೆ ಪಾಠ ಮಾಡಿದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಎಚ್.ಆರ್.ಈಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ https://www.vijayavani.net/book-and-bag-distribution https://www.vijayavani.net/%e0%b2%ae%e0%b3%8c%e0%b2%b2%e0%b2%be%e0%b2%a8-%e0%b2%86%e0%b2%9d%e0%b2%be%e0%b2%a6%e0%b3%8d-%e0%b2%a4%e0%b2%b0%e0%b2%97%e0%b2%a4%e0%b2%bf-%e0%b2%86%e0%b2%b0%e0%b2%82%e0%b2%ad-%e0%b2%b8%e0%b2%b0