ಜಿಲ್ಲೆ

ಪ್ರಾಮಾಣಿಕ ಸೇವೆಯಿಂದ ಸಂಸ್ಥೆಯ ಏಳಿಗೆ : ರಂಗನಾಥ ಶೆಟ್ಟಿ ಹೇಳಿಕೆ

ಸೌಮ್ಯ ಆರ್

ಮೂಲ್ಕಿ: ಪ್ರಾಮಾಣಿಕ ಸೇವೆಯ ಮೂಲಕ ಸಂಸ್ಥೆಯ ಏಳಿಗೆಗೆ ಸಹಕಾರಿಯಾಗಿ ನಿವೃತ್ತಿ ಹೊಂದುತ್ತಿರುವ ಮಾಧವ ಕೋಟ್ಯಾನ್ ಕಾರ್ಯ ಪ್ರವ್ರತ್ತಿ ಯುವ ಸಿಬ್ಬಂದಿಗೆ ಮಾದರಿ ಎಂದು ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಹೇಳಿದರು.

ಮೂಲ್ಕಿಯಲ್ಲಿ ಶನಿವಾರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಸ್ಥೆಯಲ್ಲಿ ಸಿಬ್ಬಂದಿಯಾಗಿ 43ವರ್ಷ ಸುಧೀರ್ಘ ಸೇವೆಯ ಬಳಿಕ ನಿವೃತ್ತಿ ಹೊಂದುತ್ತಿರುವ ಮಾಧವ ಕೋಟ್ಯಾನ್ ಕೆ.ಎಸ್.ರಾವ್ ನಗರ ಅವರನ್ನು ಬೆಳ್ಳಿ ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಬ್ಯಾಂಕ್ ಆಫ್ ಬರೋಡಾ ಮೂಲ್ಕಿ ಶಾಖಾ ಪ್ರಭಂದಕ ಸಚಿನ್ ಹೆಗ್ಡೆ, ಸಂಸ್ಥೆ ಮ್ಯಾನೇಜಿಂಗ್ ಡೈರೆಕ್ಟರ್ ಶಿವರಾಮ್ ಶೆಟ್ಟಿ, ನಿರ್ದೇಶಕ ಗಂಗಾಧರ ಶೆಟ್ಟಿ ಬರ್ಕೆತೋಟ ಅಭಿನಂದನಾ ಭಾಷಣ ಮಾಡಿದರು.

ಸಂಸ್ಥೆ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ನಿರ್ದೇಶಕರಾದ ಪದ್ಮಿನಿ ವಿ.ಶೆಟ್ಟಿ, ರಾಜೇಶ್ ಶೆಟ್ಟಿ, ನರಸಿಂಹ ಪೂಜಾರಿ, ನಂಜುಂಡ ಆರ್.ಕೆ., ಅಶೋಕ್ ಕುಮಾರ್ ಚಿತ್ರಾಪು, ಪ್ರಭಾಕರ ದೇವಾಡಿಗ ಮತ್ತು ಸಂಸ್ಥೆ ಸಿಬ್ಬಂದಿ ಹಾಜರಿದ್ದರು. ಸಂಸ್ಥೆ ಪ್ರಬಂಧಕ ಚಂದ್ರಕಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.