ಜಿಲ್ಲೆ

ಬೀಳ್ಕೊಡುಗೆ ಸಮಾರಂಭ

Dharwada - Vikram Nadiger

ಧಾರವಾಡ: ನಗರದ ವನಿತಾ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಶಾಲಾ ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ಬಸವರಾಜ ಚಿಕ್ಕೂರ ಉದ್ಘಾಟಿಸಿದರು.

ವನಿತಾ ಸೇವಾ ಸಮಾಜದ ಕಾರ್ಯದರ್ಶಿ ಮಧುರಾ ಹೆಗಡೆ, ನಿರ್ದೇಶಕಿ ರಾಜೇಶ್ವರಿ ಅಳಗವಾಡಿ, ಮುಖ್ಯಾಧ್ಯಾಪಕ ಐ.ಎಚ್​. ಪೂಜಾರ, ಶಿಕ್ಷಕರಾದ ಸವಿತಾ ವಿಭೂತಿ, ಸುಮಾ ರಜಪೂತ, ಮಲ್ಲಿಕಾರ್ಜುನ ಹಳ್ಳೂರ, ಆರ್​.ಸಿ. ಹಿರೇಮಠ, ಪ್ರತಿಭಾ ಪಾಟೀಲ ಇದ್ದರು.